ಸಾರಾಂಶ
ಅಥ್ಲೆಟಿಕ್ಸ್ ಕೂಟದಲ್ಲಿ ಕೊಡಗು ವಿದ್ಯಾಲಯ ತಂಡವು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಒಟ್ಟು 300 ಕ್ರೀಡಾಪಟುಗಳು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಬ್ರಹ್ಮಗಿರಿ ಸಹೋದಯ ಅಥ್ಲೆಟಿಕ್ಸ್ ಕೂಟದಲ್ಲಿ ನಗರದ ಕೊಡಗು ವಿದ್ಯಾಲಯ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.ನಗರದ ಕೊಡಗು ವಿದ್ಯಾಲಯದ ಮೈದಾನದಲ್ಲಿ ಅಥ್ಲೆಟಿಕ್ಸ್ ನಡೆಯಿತು. 8 ಸಿಬಿಎಸ್‌ಇ ಶಾಲೆಗಳು ಭಾಗವಹಿಸಿದ್ದವು. ಸೈನಿಕ್ ಶಾಲೆ ಕೂಡಿಗೆ, ಜ್ಞಾನಗಂಗಾ ರೆಸಿಡೆನ್ಷಿಯಲ್ ಶಾಲೆ ಕುಶಾಲನಗರ, ನ್ಯಾಷನಲ್ ಅಕಾಡೆಮಿ ಗೋಣಿಕೊಪ್ಪ, ಎಸ್‌ಎಂಎಸ್ ವಿದ್ಯಾಪೀಠ ಅರಮೇರಿ, ಅಂಕೂರು ಪಬ್ಲಿಕ್ ಶಾಲೆ ನಾಪೋಕ್ಲು, ಕುರುಂಜಿ ವೆಂಕಟರಮಣ ಪಬ್ಲಿಕ್ ಶಾಲೆ ಸುಳ್ಯ, ಕ್ರೆಸೆಂಟ್ ಶಾಲೆ ಮಡಿಕೇರಿ ಮತ್ತು ಆತಿಥೇಯ ಶಾಲೆ ಕೊಡಗು ವಿದ್ಯಾಲಯಗಳ ಒಟ್ಟು 300 ಕ್ರೀಡಾಪಟುಗಳು ಭಾಗವಹಿಸಿದ್ದರು.
ಅಥ್ಲೆಟಿಕ್ ಪಂದ್ಯಾಟವನ್ನು ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಮಿನ್ನಿ ಉಣ್ಣಿರಾಜ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತ ವ್ಯವಸ್ಥಾಪಕ ರವಿ ಪಿ., ಶಿಕ್ಷಕರು ಮತ್ತು ತಂಡದ ಕೋಚ್‌ಗಳು ಹಾಜರಿದ್ದರು.ಕ್ರೀಡಾಕೂಟದ ವಿಜೇತರು: ಉಪಜೂನಿಯರ್ ಬಾಲಕ ವಿಭಾಗ: ಜಾರ್ಜ್ ಮೇಥ್ಯೂ (ಕೊಡಗು ವಿದ್ಯಾಲಯ) ಹಾಗೂ ನವನಿಕ (ನ್ಯಾಷನಲ್ ಅಕಾಡಮಿ ಶಾಲೆ).
ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗ: ತನಿಷ್ ಎನ್.ಜಿ. ಮತ್ತು ಶೃಂಗಾ ಗಂಗಮ್ಮ (ಕೊಡಗು ವಿದ್ಯಾಲಯ).ಹೈಸ್ಕೂಲ್ ಬಾಲಕ ಮತ್ತು ಬಾಲಕಿಯರ ವಿಭಾಗ: ಇರ್ಶಾನ್ ವಿ.ಐ. ಮತ್ತು ಹಿತಾ ಎನ್.ಬಿ. (ಕೊಡಗು ವಿದ್ಯಾಲಯ).
ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿಗಳನ್ನು ಗೆದ್ದು ಕೊಡಗು ವಿದ್ಯಾಲಯವು ಪ್ರಶಂಸೆಗೆ ಪಾತ್ರವಾಯಿತು.