ಸಾರಾಂಶ
ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಲ್ಲಿನ ಶ್ರೀ ಲಕ್ಷ್ಮಣಪೂರ್ವಜ: ಜಪ ಕೇಂದ್ರದಲ್ಲಿ ಶನಿವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯ ಸ್ವಾಮೀಜಿಯವರ ಮಠ ಪರಂಪರೆಯು 550 ವರ್ಷ ಪೂರ್ಣಗೊಳಿಸಿದ ಆಚರಣೆಯ ಪ್ರಯುಕ್ತ ಸಂಕಲ್ಪಿತ 550 ಕೋಟಿ ಶ್ರೀ ರಾಮ ನಾಮ ಜಪ ಅಭಿಯಾನವು 550 ದಿನ ಪೂರೈಸಿದ್ದು, ಅದರ ಮಂಗಲೋತ್ಸವ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ವಾಯುಸ್ತುತಿ ಹವನ ನಡೆಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಲ್ಲಿನ ಶ್ರೀ ಲಕ್ಷ್ಮಣಪೂರ್ವಜ: ಜಪ ಕೇಂದ್ರದಲ್ಲಿ ಶನಿವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಒಡೆಯ ಸ್ವಾಮೀಜಿಯವರ ಮಠ ಪರಂಪರೆಯು 550 ವರ್ಷ ಪೂರ್ಣಗೊಳಿಸಿದ ಆಚರಣೆಯ ಪ್ರಯುಕ್ತ ಸಂಕಲ್ಪಿತ 550 ಕೋಟಿ ಶ್ರೀ ರಾಮ ನಾಮ ಜಪ ಅಭಿಯಾನವು 550 ದಿನ ಪೂರೈಸಿದ್ದು, ಅದರ ಮಂಗಲೋತ್ಸವ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ವಾಯುಸ್ತುತಿ ಹವನ ನಡೆಯಿತು.ಇದಕ್ಕೆ ಮೊದಲು ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ವಾಯುಸ್ತುತಿ ಹವನದ ಧಾರ್ಮಿಕ ಪೂಜಾ ಕಾರ್ಯಗಳು ದಯಾನಂದ ಭಟ್, ಚೆಂಪಿ ಪ್ರಕಾಶ್ ಭಟ್, ದೇವಳದ ಪ್ರಧಾನ ಅರ್ಚಕ ಬಿ.ಪಾಂಡುರಂಗ ಭಟ್ ಮಾರ್ಗದರ್ಶನದಲ್ಲಿ ಋತ್ವಿಜವೃಂದವರು ನಡೆಸಿಕೊಟ್ಟರು.
ಈ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ರಾಮನಾಮ ಜಪಪಠಣ, ಪೂರ್ಣಾಹುತಿ ಬಳಿಕ ಮಹಾಪೂಜೆ ನಡೆಸಲಾಯಿತು. ವಾಯುಸ್ತುತಿ ಹವನದ ಕುರಿತು ಪ್ರವಚನವನ್ನು ಬ್ರಹ್ಮಾವರ ರಾಮಕೃಷ್ಣ ಭಟ್ ನೆಡೆಸಿಕೊಟ್ಟರು. ಬಳಿಕ ಪಲ್ಲಪೂಜೆ, ಪ್ರಸಾದ ವಿತರಣೆ, ಸಮಾರಾಧನೆ ಜರಗಿತು.ಈ ಎಲ್ಲ ಕಾರ್ಯಕ್ರಮಗಳಲ್ಲಿ ದೇವಳದ ಆಡಳಿತ ಮೊಕ್ತೇಸರಾದ ಕೆ. ನರೇಂದ್ರ ಪೈ, ಬಿ.ಪಿ. ಗೋಪಾಲಕೃಷ್ಣ ಪೈ, ಸೇವಾದಾರರಾದ ಬ್ರಹ್ಮಾವರ ಭಟ್ ಕುಟುಂಬಸ್ಥರು ಹಾಗೂ ರಾಮ ನಾಮ ಜಪ ಅಭಿಯಾನ ಸಮಿತಿಯ ಸಂಚಾಲಕ ಬಿ.ಪಿ. ಮೋಹನದಾಸ ಪೈ, ಸಮಿತಿಯ ಪದಾಧಿಕಾರಿಗಳು, ಜಿ.ಎಸ್.ಬಿ. ಮಹಿಳಾ ಮಂಡಳಿ, ಜಿ.ಎಸ್.ಬಿ. ಯುವಕ ಮಂಡಳಿಯ ಸದಸ್ಯರು ಸಹಕರಿಸಿದರು.