ಬ್ರಹ್ಮಾವರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ

| Published : Feb 08 2024, 01:31 AM IST

ಸಾರಾಂಶ

ಬ್ರಹ್ಮಾವರ ತಾಲೂಕು ಜನತಾ ದರ್ಶನದಲ್ಲಿ ಕಾರ್ಯಕ್ರಮದಲ್ಲಿ 85 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ 49, ಗ್ರಾಮೀಣ ಅಭಿವೃದ್ದಿ ಇಲಾಖೆಗೆ 22, ಶಿಕ್ಷಣ ಇಲಾಖೆ 1, ಗಣಿ ಇಲಾಖೆ 1, ಸಬ್ ರಿಜಿಸ್ಟಾರ್ 2, ಭೂಮಾಪಾನ ಇಲಾಖೆಗೆ 1, ಸಿಡಿಪಿಯು 3, ಮೆಸ್ಕಾಂ 1, ಲೋಕೋಪಯೋಗಿ ಇಲಾಖೆ 2, ಸಾರಿಗೆ ಇಲಾಖೆ 1 ಹಾಗೂ ಪೋಲಿಸ್ ಇಲಾಖೆಗೆ 1 ಅರ್ಜಿ ಬಂದಿರುತ್ತದೆ.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಸರ್ಕಾರ ಜಾರಿಗೆ ತಂದಿರುವ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಮಸ್ಯೆಯೊಂದಿಗೆ ಬರುವ ಜನಸಾಮಾನ್ಯರಿಗೆ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬುಧವಾರ ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರುಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜನತಾ ದರ್ಶನ ಬರೀ ಕಾರ್ಯಕ್ರಮವಾಗದೆ ಜನರಿಗೆ ಪರಿಹಾರ ಸೂಚಿಸುವಂತಹ ವೇದಿಕೆ ಆಗಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿಯೂ ಕಾರ್ಯಕ್ರಮ ಆಯೋಜಿಸಿ, ಹೋಬಳಿ ಮಟ್ಟದ ಅಧಿಕಾರಿಗಳು ಅಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಅರ್ಜಿಗಳು ಬಂದಲ್ಲಿ ಅವುಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್., ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿ ರಾಜು ಮೊಗವೀರ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ವಾರಂಬಳ್ಳಿ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪುರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬ್ರಹ್ಮಾವರ ತಹಸೀಲ್ದಾರ್ ಶ್ರೀಕಾಂತ್ ಎಸ್. ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಸ್ವಾಗತಿಸಿದರು. ರಾಘವ ಶೆಟ್ಟಿ ನಿರೂಪಿಸಿದರು, ಪ್ರಕಾಶ್ ವಂದಿಸಿದರು.85 ದೂರು ಅರ್ಜಿ ಸ್ವೀಕಾರ:

ಕಾರ್ಯಕ್ರಮದಲ್ಲಿ 85 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕಂದಾಯ ಇಲಾಖೆಗೆ 49, ಗ್ರಾಮೀಣ ಅಭಿವೃದ್ದಿ ಇಲಾಖೆಗೆ 22, ಶಿಕ್ಷಣ ಇಲಾಖೆ 1, ಗಣಿ ಇಲಾಖೆ 1, ಸಬ್ ರಿಜಿಸ್ಟಾರ್ 2, ಭೂಮಾಪಾನ ಇಲಾಖೆಗೆ 1, ಸಿಡಿಪಿಯು 3, ಮೆಸ್ಕಾಂ 1, ಲೋಕೋಪಯೋಗಿ ಇಲಾಖೆ 2, ಸಾರಿಗೆ ಇಲಾಖೆ 1 ಹಾಗೂ ಪೋಲಿಸ್ ಇಲಾಖೆಗೆ 1 ಅರ್ಜಿ ಬಂದಿರುತ್ತದೆ.