ಬ್ರಹ್ಮಾವರ: ಕಿಶೋರ ಯಕ್ಷಗಾನ ಸಮಾರೋಪ

| Published : Dec 03 2024, 12:35 AM IST

ಸಾರಾಂಶ

ಬ್ರಹ್ಮಾವರ ಬಂಟರ ಭವನದ ಮುಂಭಾಗದಲ್ಲಿ ಒಂದು ವಾರ ಪರ್ಯಂತ ೧೩ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ಪ್ರದರ್ಶನ ಸಮಾಪನಗೊಂಡಿತು. ೧೪೩ ಬಾಲಕರು, ೨೯೦ ಬಾಕಿಯರು ಸೇರಿ ಒಟ್ಟು ೪೩೩ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರಬ್ರಹ್ಮಾವರ ಬಂಟರ ಭವನದ ಮುಂಭಾಗದಲ್ಲಿ ಒಂದು ವಾರ ಪರ್ಯಂತ ೧೩ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ಪ್ರದರ್ಶನ ಸಮಾಪನಗೊಂಡಿತು. ೧೪೩ ಬಾಲಕರು, ೨೯೦ ಬಾಕಿಯರು ಸೇರಿ ಒಟ್ಟು ೪೩೩ ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಇದರಲ್ಲಿ ೨೦ ಹೊರಜಿಲ್ಲೆ, ೨ ಹೊರ ರಾಜ್ಯ ಹಾಗೂ ೨ ಕ್ರಿಶ್ಚಿಯನ್ ವಿದ್ಯಾರ್ಥಿಗಳಾಗಿದ್ದರು. ಈ ಸಂದರ್ಭದಲ್ಲಿ ಪಾಲ್ಗೊಂಡ ಎಲ್ಲ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣ ಪತ್ರ, ಗುಂಪು ಫೋಟೊ ಹಾಗೂ ಪ್ರೊ. ಬಿ.ವಿ. ಆಚಾರ್ಯರ ಕುರಿತ ‘ಸೇವಾ ಸಿಂಧು’ ಪುಸ್ತಕ ಸ್ಮರಣಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು.ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ದೀಕ್ಷಾ, ಶ್ರಾವ್ಯಾ, ಸ್ವಸ್ತಿಕ್, ತನುಷ್, ಚಿನ್ಮಯಿ ಹಾಗೂ ಪ್ರಸ್ತುತ ನೀಲಾವರ ಮೇಳದ ವೃತ್ತಿ ಕಲಾವಿದನಾಗಿ ಸೇರ್ಪಡೆಗೊಂಡ ಯಕ್ಷಶಿಕ್ಷಣದ ಹಳೆಯ ವಿದ್ಯಾರ್ಥಿ ಸುಜನ್ ಕುಮಾರ್ ತಮ್ಮ ಅನುಭವಗಳನ್ನು ಹಂಚಿದರು.

ವೇದಿಕೆಯಲ್ಲಿ ಅಭ್ಯಾಗತರಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಎಂ. ಗಂಗಾಧರ ರಾವ್, ರಾಜು ಕುಲಾಲ್, ಟಿ. ಭಾಸ್ಕರ ರೈ, ಧನಂಜಯ್ ಅಮೀನ್, ಜ್ಞಾನ ವಸಂತ್ ಶೆಟ್ಟಿ, ಆರೂರು ಶ್ರೀಧರ ಶೆಟ್ಟಿ, ರವಿ ಶೆಟ್ಟಿ ಕುಮ್ರಗೋಡು ಭಾಗವಹಿಸಿದ್ದರು.ಆರಂಭದಲ್ಲಿ ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಸಮಿತಿಯ ಕಾರ್ಯದರ್ಶಿ ಉದಯ ಪೂಜಾರಿ ವಂದಿಸಿದರು. ಟ್ರಸ್ಟ್ ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ ಹಾಗೂ ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.