ಬ್ರಹ್ಮಾವರ: ಮಕ್ಕಳಲ್ಲಿ ಕುತೂಹಲ ಮೂಡಿಸಿದ ಆಕಾಶ ವೀಕ್ಷಣೆ!

| Published : Mar 05 2025, 12:35 AM IST

ಬ್ರಹ್ಮಾವರ: ಮಕ್ಕಳಲ್ಲಿ ಕುತೂಹಲ ಮೂಡಿಸಿದ ಆಕಾಶ ವೀಕ್ಷಣೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ‘ನೆಲ - ನೀರು- ಆಕಾಶ’ ಎಂಬ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ ‘ಆಕಾಶ ವೀಕ್ಷಣೆ’ಯನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ರಾಷ್ಟೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ‘ನೆಲ - ನೀರು- ಆಕಾಶ’ ಎಂಬ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ ‘ಆಕಾಶ ವೀಕ್ಷಣೆ’ಯನ್ನು ಆಯೋಜಿಸಲಾಗಿತ್ತು.ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಕಾರದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಮಕ್ಕಳಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಖಗೋಳ ಶಾಸ್ತ್ರದ ಕುರಿತು ಆಸಕ್ತಿಯನ್ನು ಹೆಚ್ಚಿಸಿ, ಸ್ಫೂರ್ತಿ ತುಂಬುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು.

ಉಡುಪಿಯ ಪೂರ್ಣಪ್ರಜ್ಞಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ (ಪಿಎಎಸಿ)ವು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು. ಸಂಘದ ಸ್ವಯಂಸೇವಕ ಪ್ರತಿನಿಧಿಗಳಾದ ಭಾರ್ಗವ, ದೀಪ್ತಿ ಮತ್ತು ನೇಹಾ ಅವರು ವಿವಿಧ ದೂರದರ್ಶಕ ಉಪಕರಣವನ್ನು ಜೋಡಿಸಿ ವಿದ್ಯಾರ್ಥಿಗಳಿಗೆ ಆಕಾಶ ಕಾಯಗಳನ್ನು ತೋರಿಸಿ ಅವುಗಳ ಬಗ್ಗೆ ವೀಕ್ಷಕ ವಿವರಣೆಯನ್ನು ನೀಡಿದರು.ಮಣಿಪಾಲ ಎಂಐಟಿಯ ಭೌತಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ವ್ಯಾಸ ಉಪಾಧ್ಯಾಯ, ಖಗೋಳ ವೀಕ್ಷಣೆಯ ಮಹತ್ವವನ್ನು ತಿಳಿಸಿದರು. ಪಿಎಎಸಿ ಉಸ್ತುವಾರಿ ಡಾ. ಬಿ. ಲಕ್ಷ್ಮೀಶ ರಾವ್, ವಿದ್ಯಾರ್ಥಿಗಳಿಗೆ ಖಗೋಳ ವೀಕ್ಷಣೆಯ ಮಾರ್ಗದರ್ಶನ ಮಾಡಿದರು.ಶಾಲೆಯ ಮುಖ್ಯೋಪಾಧ್ಯಾಯಿನಿ ಅಭಿಲಾಷಾ ಹಂದೆ, ಶಾಲೆಯ ಪ್ರಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ರಾತ್ರಿಯ ಆಕಾಶಕಾಯಗಳ ವೀಕ್ಷಣೆಯ ಅನುಭವವು ವಿದ್ಯಾರ್ಥಿಗಳಲ್ಲಿ ಖಗೋಳ ವಿಜ್ಞಾನದ ಬಗ್ಗೆ ತೀವ್ರವಾದ ಕುತೂಹಲವನ್ನು, ಆಸಕ್ತಿಯನ್ನೂ ಹುಟ್ಟುಹಾಕಿತು.