ಜನಿವಾರ ತೆಗೆಸಿದ್ದಕ್ಕೆ ಬ್ರಾಹ್ಮಣ ಸಮಾಜದಿಂದ ಖಂಡನೆ

| Published : Apr 24 2025, 11:46 PM IST

ಸಾರಾಂಶ

ಈ ಪ್ರಕರಣ ಕೇವಲ ಬ್ರಾಹ್ಮಣ ಸಮಾಜಕ್ಕೆ ಆಗಿರುವ ಅಪಮಾನವಲ್ಲದೆ, ಇಡೀ ಸನಾತನ ಹಿಂದೂ ಧರ್ಮದ ಭಾವನೆಗಳಿಗೆ ಆಗಿರುವ ದೊಡ್ಡ ಅಪಮಾನವಾಗಿದೆ. ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ

ಸಂಡೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಶಿವಮೊಗ್ಗ, ಬೀದರ್ ಮತ್ತಿತರ ಕೆಲವು ಕಡೆಯ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ(ಯಜ್ಞೋಪವೀತ) ತೆಗೆಸಿರುವ ಪ್ರಕರಣ ಖಂಡಿಸಿರುವ ತಾಲೂಕು ಬ್ರಾಹ್ಮಣ ಸಮಾಜದ ಮುಖಂಡರು ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರವನ್ನು ಗ್ರೇಡ್ ೨ತಹಸೀಲ್ದಾರ್ ಸುಧಾ ಅರಮನೆಗೆ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಬ್ರಾಹ್ಮಣ ಸಮಾಜದ ಮುಖಂಡರು, ಈ ಪ್ರಕರಣ ಕೇವಲ ಬ್ರಾಹ್ಮಣ ಸಮಾಜಕ್ಕೆ ಆಗಿರುವ ಅಪಮಾನವಲ್ಲದೆ, ಇಡೀ ಸನಾತನ ಹಿಂದೂ ಧರ್ಮದ ಭಾವನೆಗಳಿಗೆ ಆಗಿರುವ ದೊಡ್ಡ ಅಪಮಾನವಾಗಿದೆ. ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ವಿಜಯೇಂದ್ರರಾವ್, ವಿ.ಎಲ್. ಜೋಷಿ, ಸತ್ಯನಾರಾಯಣ ಜೋಷಿ, ವಾದಿರಾಜ್, ಘೋಷಿ ಶೀನಪ್ಪ, ಪಾಂಡುರಂಗ ಭಟ್,ಕೆ. ವಿಶ್ವನಾಥ್, ಕೆ. ಸತ್ಯನಾರಾಯಣರಾವ್, ಪಿ.ರವಿ, ಕೃಷ್ಣರಾವ್ ಕುಲಕರ್ಣಿ, ಕೆ.ಎನ್.ಸುರೇಶ್ ಆಚಾರ್, ಆರ್.ಪಾಂಡುರಂಗ ಭಟ್, ಶಿವಾಜಿ ಭಟ್, ಎಸ್. ವೆಂಕೋಬರಾವ್, ಕೆ.ಬದ್ರನಾರಾಯಣಾಚಾರ್, ಎನ್.ಪ್ರಭಾಕರ್‌ರಾವ್, ನಾರಾಯಣಾಚಾರ್, ವಿಷ್ಣುತೀರ್ಥಾಚಾರ್, ಗುರುರಾಜ್, ಔದುಂಬರ ಭಟ್, ವಿಜಯಲಕ್ಷ್ಮೀ, ಸೌಭಾಗ್ಯ, ರೂಪಾ, ವೀಣಾ ಮುಂತಾದವರು ಉಪಸ್ಥಿತರಿದ್ದರು.