ಸಾರಾಂಶ
ಸದಾ ಕಾಲಕ್ಕೂ ಸಂಘದ ಚಟುವಟಿಕೆಗಾಗಿ ಸಹಕಾರ ನೀಡುತ್ತೇನೆ
ಫೋಟೋ- 1ಎಂವೈಎಸ್46----ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೆ.ಆರ್. ಮೊಹಲ್ಲಾದಲ್ಲಿರುವ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘದ ನವೀಕೃತ ಕಟ್ಟಡಕ್ಕೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಸೋಮವಾರ ಭೇಟಿ ನೀಡಿದ್ದರು. ನವಿಕೃತ ಕಟ್ಟಡಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ಮಾತನಾಡಿದ ಅವರು, ನಮ್ಮ ತಂದೆ ಗುಂಡೂರಾವ್ ಅವರ ಅಚ್ಚುಮೆಚ್ಚಿನ ಪ್ರೀತಿಪಾತ್ರವಾದ ಸೋಸಲೆ ಕರ್ನಾಟಕ ಬ್ರಾಹ್ಮಣ ಸಂಘ ಮೈಸೂರಿನಲ್ಲಿ 1924ರಲ್ಲೆ ನಿರ್ಮಾಣ ಮಾಡಿದ್ದ ವಿದ್ಯಾರ್ಥಿನಿಲಯವು ಶತಮಾನೋತ್ಸವ ಕಂಡಿದೆ. ನಮ್ಮ ತಂದೆಯವರು ಸಹ ಭೇಟಿ ನೀಡುತ್ತಿದ್ದರು. ಹಾಗೆಯೆ ನಾನು ಸಹ ತಂದೆ- ತಾಯಿಯಿಂದ ರೂಢಿಸಿಕೊಂಡ ಸೇವಾ ಮನೋಭಾವದ ದೃಷ್ಟೀಯಿಂದ ಸದಾ ಕಾಲಕ್ಕೂ ಸಂಘದ ಚಟುವಟಿಕೆಗಾಗಿ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಎಚ್.ವಿ. ರಾಜೀವ್, ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಮಹೇಶ್ ಕುಮಾರ್, ಖಜಾಂಜಿ ಎಸ್.ಎಲ್. ನಾಗರಾಜ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್ ಮೊದಲಾದವರು ಇದ್ದರು.