ಸಾರಾಂಶ
62ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು ವರರ ಸಮಾವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ಬ್ರಾಹ್ಮಣ ವಿವಿಧ ಸಂಘಟನೆಗಳು, ಮಂಗಳಸೂತ್ರ ಫೌಂಡೇಶನ್, ಶ್ರೀ ರಾಮಮಂದಿರ,ಅಖಿಲ ಕರ್ನಾಟಕ ಶ್ರೀವೈಷ್ಣವ ಮಹಾಸಭಾಗಳ ಸಹಯೋಗದಲ್ಲಿ 62ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು ವರರ ಸಮಾವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು.ಮೇಲುಕೋಟೆ ಇಳೈ ಆಳ್ವಾರ್ ಸ್ವಾಮೀಜಿ, ಅಮೃತೇಶ್ವರ ದೇವಸ್ಥಾನದ ಮೈ. ಕುಮಾರ್ ಸಾನ್ನಿಧ್ಯ ವಹಿಸಿದರು. ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಉದ್ಘಾಟಿಸಿದರು.
ಹಿರಿಯ ವಿಪ್ರ ಪ್ರಮುಖರಾದ ರಘರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಹೊಯ್ಸಳ ಕರ್ನಾಟಕ ಕರ್ನಾಟಕ ಅಧ್ಯಕ್ಷ ಕೆ..ಆರ್. ಸತ್ಯನಾರಾಯಣ, ಎಕೆಬಿಎಂಎಸ್ ರಾಜ್ಯ ಉಪಾಧ್ಯಕ್ಷ ಅನಿಲ್ ಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀನಿವಾಸ್ ಎಸ್. ಭಾರದ್ವಾಜ್, ರಂಗನಾಥ್, ರಾಜಕುಮಾರ್, ಜಯಶ್ರೀ ಶಿವರಾಮ್, ಕನ್ನಡಪ್ರಭ ಪತ್ರಿಕೆಯ ಪ್ರಸರಣ ವಿಭಾಗದ ನಿವೃತ್ತ ವ್ಯವಸ್ಥಾಪಕ ಎಚ್.ಎನ್. ಗಣೇಶ್ ಭಾಗವಹಿಸಿದ್ದರು.