ಮೆದುಳು ಸಕ್ರಿಯ ಬಳಕೆಯಾದಲ್ಲಿ ಸಮಸ್ಯೆಗಳಿಗೆ ಮುಕ್ತ ಸಾಧ್ಯ: ಡಾ.ಚಂದ್ರಶೇಖರ

| Published : Dec 27 2024, 12:46 AM IST

ಸಾರಾಂಶ

ಮನುಷ್ಯ ಇತರ ಎಲ್ಲ ಪ್ರಾಣಿಗಳಿಗಿಂತ ಭಿನ್ನವಾಗಲು ಅವನ ಮೆದುಳೇ ಕಾರಣ. ಹತ್ತಾರು ಟನ್ ಭಾರವಿರುವ ಬ್ಲೂವೆಲ್, ನೂರಾರು ಟನ್ ಭಾರವಿರುವ ಆನೆಗಳ ಮೆದುಳಿಗಿಂತ ಕೆಲವೇ ಕೇಜಿಗಳಲ್ಲಿ ತೂಗುವ ಮಾನವನ ಮೆದುಳಿನ ತೂಕ ಅವುಗಳಿಗಿಂತ ಹೆಚ್ಚು ಎಂದು ಮಾನಸಿಕ ಆರೋಗ್ಯ ತಜ್ಞ, ಪದ್ಮಶ್ರೀ ಡಾ. ಸಿ.ಆರ್.ಚಂದ್ರಶೇಖರ ಹೇಳಿದ್ದಾರೆ.

- ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ 55ನೇ ವಾರ್ಷಿಕೋತ್ಸವ- ಸಂವಾದ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮನುಷ್ಯ ಇತರ ಎಲ್ಲ ಪ್ರಾಣಿಗಳಿಗಿಂತ ಭಿನ್ನವಾಗಲು ಅವನ ಮೆದುಳೇ ಕಾರಣ. ಹತ್ತಾರು ಟನ್ ಭಾರವಿರುವ ಬ್ಲೂವೆಲ್, ನೂರಾರು ಟನ್ ಭಾರವಿರುವ ಆನೆಗಳ ಮೆದುಳಿಗಿಂತ ಕೆಲವೇ ಕೇಜಿಗಳಲ್ಲಿ ತೂಗುವ ಮಾನವನ ಮೆದುಳಿನ ತೂಕ ಅವುಗಳಿಗಿಂತ ಹೆಚ್ಚು ಎಂದು ಮಾನಸಿಕ ಆರೋಗ್ಯ ತಜ್ಞ, ಪದ್ಮಶ್ರೀ ಡಾ. ಸಿ.ಆರ್.ಚಂದ್ರಶೇಖರ ಹೇಳಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 55ನೇ ವಾರ್ಷಿಕೋತ್ಸವ ಅಂಗವಾಗಿ ಗುರುವಾರ ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಈ ತೂಕವನ್ನು ಭಾರದಲ್ಲಿ ಲೆಕ್ಕ ಹಾಕದೆ ಮೌಲ್ಯದಿಂದ ಲೆಕ್ಕ ಹಾಕಿದಾಗ ಮನುಷ್ಯನ ವಿಕಾಸದ ಹಾದಿ ತಿಳಿಯುತ್ತದೆ ಎಂದರು.

ಮನುಷ್ಯನ ಮನಸ್ಸು ಮತ್ತು ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ವಿದ್ಯಾರ್ಥಿಗಳು ಇಂದಿನ ಶೈಕ್ಷಣಿಕ ಸವಾಲುಗಳನ್ನು ಸಮಸ್ಯೆಗಳಾಗಿ ಮಾಡಿಕೊಳ್ಳದೇ ನಿರ್ಮಲ ಹಾಗೂ ಸಮಾಧಾನ ಚಿತ್ತದಿಂದ ಚಟುವಟಿಕೆಗಳಲ್ಲಿ ಭಾಗವಹಿಸಿ, ಯಶಸ್ಸು ಗಳಿಸಲು ಸಲಹೆ ನೀಡಿದರು.

ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಡಾ.ಚಂದ್ರಶೇಖರ್‌ ಉತ್ತರಿಸಿದರು. ಈ ಸಂದರ್ಭದಲ್ಲಿ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥೆ ಡಾ.ಜಸ್ಟಿನ್ ಡಿಸೋಜ, ಕಾರ್ಯದರ್ಶಿ ಡಿ.ಎಸ್. ಹೇಮಂತ್, ನಿರ್ದೇಶಕ ಡಿ.ಎಸ್.ಜಯಂತ್, ವಿವಿಧ ವಿಭಾಗಗಳ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -26ಕೆಡಿವಿಜಿ36:

ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಡಾ. ಸಿ.ಆರ್. ಚಂದ್ರಶೇಖರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.