ಸಾರಾಂಶ
ಮುಧೋಳ: ನೇತಾಜಿ ಸುಭಾಷ್ ಚಂದ್ರಬೋಸ್ ಈ ಹೆಸರು ಕೇಳಿದ ತಕ್ಷಣ ದೇಶ ಪ್ರೇಮದ ಕಿಚ್ಚು ಇನ್ನಷ್ಟು ಜಾಗೃತವಾಗುತ್ತದೆ, ಸಿಡಿಲಬ್ಬರದ ಘೋಷಣೆಗಳು ನೆನಪಾಗುತ್ತವೆ. ಪ್ರಖರ ಚಿಂತನೆಗಳು ಸ್ಮೃತಿ ಪಟಲದಲ್ಲಿ ಸುಳಿದಾಡುತ್ತವೆ ಎಂದು ಡಾ.ಮಲ್ಲಿಕಾರ್ಜುನ ಜರಕುಂಟಿ ಹೇಳಿದರು. ಸ್ಥಳೀಯ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ನೇತಾಜಿ ಸುಭಾಷ್ ಚಂದ್ರಬೋಸ್ ಈ ಹೆಸರು ಕೇಳಿದ ತಕ್ಷಣ ದೇಶ ಪ್ರೇಮದ ಕಿಚ್ಚು ಇನ್ನಷ್ಟು ಜಾಗೃತವಾಗುತ್ತದೆ, ಸಿಡಿಲಬ್ಬರದ ಘೋಷಣೆಗಳು ನೆನಪಾಗುತ್ತವೆ. ಪ್ರಖರ ಚಿಂತನೆಗಳು ಸ್ಮೃತಿ ಪಟಲದಲ್ಲಿ ಸುಳಿದಾಡುತ್ತವೆ ಎಂದು ಡಾ.ಮಲ್ಲಿಕಾರ್ಜುನ ಜರಕುಂಟಿ ಹೇಳಿದರು.ಸ್ಥಳೀಯ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಮಂಗಳವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ನಮ್ಮ ದೇಶ ಕಂಡ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಕೇಳಿದ ತಕ್ಷಣ ಬ್ರಿಟಿಷರ ಎದೆ ನಡುಗುತ್ತಿತ್ತು ಎಂಬುದು ಕೂಡ ಸತ್ಯ. ಜ.23ರಂದು ಧೀರ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ಜಯಂತಿ ದಿನವನ್ನು 2021 ರಿಂದ `ಪರಾಕ್ರಮ ದಿವಸವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಪರಾಕ್ರಮ ದಿವಸವನ್ನಾಗಿ ಆಚರಿಸಲ್ಪಡುತ್ತದೆ ಎಂದರು.
1897 ಜನವರಿ 23ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತಿ ದೇವಿ ದಂಪತಿ ಪುತ್ರನಾಗಿ ಜನಿಸಿದ್ದ ಸುಭಾಷ್ ಚಂದ್ರ ಬೋಸ್ ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದರು, ತಮ್ಮ ಪ್ರಖರ ಮಾತಿನ ಮೂಲಕವೇ ಎಲ್ಲರಲ್ಲೂ ಸ್ವಾತಂತ್ರ್ಯ ಪ್ರೇಮದ ಕಿಚ್ಚು ಜಾಗೃತಿಗೊಳಿಸಿದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕೂಡ ಒಬ್ಬರು. ಇವರ ಸ್ಫೂರ್ತಿ ತುಂಬಿದ ಮಾತುಗಳನ್ನು ಕೇಳಿಯೇ ಅದೆಷ್ಟೋ ಜನರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕ್ಕಿದ್ದರು, `ಆಜಾದ್ ಹಿಂದ್ ಫೌಜ್'''''''''''''''' (ಇಂಡಿಯನ್ ನ್ಯಾಷನಲ್ ಆರ್ಮಿ - ಐಎನ್‌ಎ) ಸೇನೆ ಕಟ್ಟಿದ್ದ ಸುಭಾಷ್ ಚಂದ್ರ ಬೋಸ್ ಕ್ರಾಂತಿಕಾರಿ ನಿಲುವಿನ ನಾಯಕರಾಗಿ ಹೊರಹೊಮ್ಮಿದ್ದರು, ನಮ್ಮ ದೇಶವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲೇಬೇಕೆಂದು ಪಣತೊಟ್ಟಿದ್ದ ನೇತಾಜಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ತನ್ನ ಪ್ರಖರ ನಿಲುವು ಗಳಿಂದಲೇ ಬಿಸಿ ಮುಟ್ಟಿಸಿದ್ದರು ಎಂದು ಹೇಳಿದರು.ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಡಾ.ಲೋಕೇಶ ರಾಠೋಡ, ಪ್ರೊ.ಪಿ.ಡಿ.ಕುಮ್ಮಾರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.