ಹೊಸೂಡಿ ಗ್ರಾಪಂ ಕಚೇರಿಯಲ್ಲಿ ಮಾರಮಾರಿ: ವೀಡಿಯೋ ವೈರಲ್‌

| Published : Sep 06 2024, 01:07 AM IST

ಹೊಸೂಡಿ ಗ್ರಾಪಂ ಕಚೇರಿಯಲ್ಲಿ ಮಾರಮಾರಿ: ವೀಡಿಯೋ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ತಾಲೂಕಿನ ಹೊಸೂಡಿ ಗ್ರಾಮ ಪಂಚಾಯಿತಿಯಲ್ಲಿ ನೀರಗಂಟಿ ಹಾಗೂ ಗ್ರಾಮಸ್ಥರ ನಡುವೆ ನಡುವೆ ಗಲಾಟೆ ನಡೆದು, ಮಾರಾಮಾರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೇಳುವ ವೇಳೆ ಮಾರಾಮಾರಿ ನಡೆದಿರುವ ಘಟನೆ ಶಿವಮೊಗ್ಗ ತಾಲೂಕಿನ ಹೊಸೂಡಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಚಿಕ್ಕಮರಡಿಯ ನೀರುಗಂಟಿ ಹನುಮಂತಪ್ಪ ಎಂಬುವರ ಮೇಲೆಯೇ ಗ್ರಾಮಸ್ಥ ಅಜರ್ ಎಂಬಾತ ತಾನು ಕುಳಿತಿದ್ದ ಮರದ ಖುರ್ಚಿಯನ್ನೇ ಎಸೆದು ಹಲ್ಲೆ ಮಾಡಿದ್ದಾನೆ. ಹಸೂಡಿ ಗ್ರಾಮ ಪಂಚಾಯಿತಿ ಗ್ರಾ.ಪಂ.ಅಧ್ಯಕ್ಷೆ ಚೈತ್ರಾ ಎದುರೇ ಈ ಮಾರಾ ಮಾರಿ ನಡೆದಿದ್ದು, ದೃಶ್ಯವೀಗ ಈಗ ವೈರಲ್ ಆಗಿದೆ. ಹಲ್ಲೆಗೂ ಮೊದಲೇ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಹಾಗೂ ನೀರುಗಂಟಿ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಅಧ್ಯಕ್ಷರ ಜೊತೆ ವಾಗ್ವಾದಕ್ಕೆ ಇಳಿದಿದ್ದ ನೀರುಗಂಟಿ ಹನುಮಂತಪ್ಪ ಮಾತಿನ ಚಕಮಕಿ ನಡೆಸಿ ಜೋರು ಜೋರಾಗಿ ಕೂಗಾಡಿ ದ್ದಾರೆ. ಈ ಮಾತಿನ ಮಧ್ಯೆ ಪ್ರವೇಶಿಸಿದ ಅಜರ್ ಮತ್ತು ಹನುಮಂತಪ್ಪ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಜರ್ ಎಂಬಾತ ತಾನು ಕುಳಿತಿದ್ದ ಪ್ಲಾಸ್ಟಿಕ್ ಖುರ್ಚಿಯನ್ನೇ ಹನಮಂತಪ್ಪ ಮೇಲೆ ಎಸೆದು ಹಲ್ಲೆ ಮಾಡಿದ್ದಾನೆ. ನಂತರ ಹನುಮಂತಪ್ಪ ಮತ್ತು ಅಜರ್ ನಡುವೆ ಅಲ್ಲಿದ್ದ ಚೇರುಗಳನ್ನು ಒಬ್ಬರ ಮೇಲೊಬ್ಬರ ಮೇಲೆ ಎಸೆದು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಎಎಸ್‌ಐ, ಸಿಬ್ಬಂದಿಗಳಾದ ಕಲ್ಲನಗೌಡ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.