ಮಗುವಿನ ಸರ್ವತೋಮುಖ ಬೆಳವಣಿಗೆಗೆ ಎದೆಹಾಲು ಅವಶ್ಯಕ

| Published : Aug 10 2024, 01:38 AM IST

ಸಾರಾಂಶ

ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯ ಎದೆ ಹಾಲು ಶ್ರೇಷ್ಠಕರವಾಗಿದ್ದು, ಇದರಿಂದ ಮಗು ಯಾವುದೇ ರೋಗಗಳಿಗೆ ತುತ್ತಾಗದೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಮಗುವಾಗಿ ಬೆಳೆಯಲು ಸಹಕಾರಿಯಾಗಲಿದೆ

ಕನ್ನಡಪ್ರಭ ವಾರ್ತೆ ತಿಪಟೂರು

ಮಗುವಿನ ಆರೋಗ್ಯ ಸುಧಾರಣೆಗೆ ತಾಯಿಯ ಎದೆ ಹಾಲು ಶ್ರೇಷ್ಠಕರವಾಗಿದ್ದು, ಇದರಿಂದ ಮಗು ಯಾವುದೇ ರೋಗಗಳಿಗೆ ತುತ್ತಾಗದೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಮಗುವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ತಾಲೂಕಿನ ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಜೀವಿತಾ ತಿಳಿಸಿದರು.

ತಾಲೂಕಿನ ಹಾಲ್ಕುರಿಕೆ ವೃತ್ತದ ಸಾರ್ಥವಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ಎದೆಹಾಲು ಮಗುವಿನ ಜನ್ಮಸಿದ್ದ ಹಕ್ಕಾಗಿದ್ದು ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದ್ದು ಅಲ್ಲದೆ ಪೌಷ್ಠಿಕಾಂಶ ಭರಿತದಿಂದ ಕೂಡಿದೆ. ಆದ್ದರಿಂದ ತಾಯಂದಿರು ಮಗುವಿಗೆ ತಪ್ಪದೆ ಎದೆಹಾಲು ಉಣಿಸಬೇಕೆಂದು ತಿಳಿಸಿದರು. ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕಿ ಕುಸುಮಾ ಸ್ತ್ರೀಶಕ್ತಿ ಸಂಘದ ಮಹಿಳೆಯರು ಆರ್ಥಿಕತೆ ಬಗ್ಗೆ ಮಾಹಿತಿ ನೀಡಿದರು. ಮೇಲ್ವಿಚಾರಕರಾದ ಲೀಲಾಬಾಯಿ ಮತ್ತು ಪದ್ಮ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾ.ಪಂ ಸದಸ್ಯ ಪ್ರಕಾಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗರ್ಭಿಣಿ ಕಾವ್ಯಗೆ ಸೀಮಂತ ಮಾಡಲಾಯಿತು. ಶಾಲಾ ಶಿಕ್ಷಕಿ ಲಕ್ಷ್ಮೀ, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಕುಸುಮ, ಸದಸ್ಯರಾದ ಸುನೀಲ್, ಅಣ್ಣಯ್ಯ, ಆರೋಗ್ಯ ಕಾರ್ಯಕರ್ತೆರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ತಾಯಂದಿರು, ಗರ್ಭಿಣಿ, ಬಾಣಂತಿಯರು ಭಾಗವಹಿಸಿದ್ದರು.