ಸಾರಾಂಶ
ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಮೇಲ್ವಿಚಾರಕಿ ಟಿ.ಸುಮಿತ್ರಮ್ಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಗು ಹಾಗೂ ಬಾಂಣತಿ ಆರೋಗ್ಯದ ಬಗ್ಗೆ ನಿರಂತರ ಮಾರ್ಗದರ್ಶನ ನೀಡುತ್ತಾ ಅವರ ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ. ಪೌಷ್ಠಿಕಾಂಶ ಆಹಾರ ವಿತರಣೆ ಹಾಗೂ ಹುಟ್ಟಿದ ಮಗುವಿಗೆ ತಾಯಿ ಹಾಲು ನಿರಂತರ ನೀಡುವ ಬಗ್ಗೆಯೂ ಸಹ ನಿರ್ದೇಶನ ನೀಡುತ್ತಾರೆ. ಮಗುವಿನ ಸರ್ವತೋಮುಖ ಆರೋಗ್ಯಕ್ಕೆ ತಾಯಿಹಾಲೇ ಮೂಲ ಕಾರಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಟಿ.ಸುಮಿತ್ರಮ್ಮ ತಿಳಿಸಿದರು.ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಳೆದ ಹಲವಾರು ದಶಕಗಳಿಂದ ಮಗು, ಬಾಂಣತಿ ಆರೋಗ್ಯದ ಬಗ್ಗೆ ಹಲವಾರು ಸವಾಲು ಎದುರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಿಪಿಒ ಎಸ್.ರಾಜಾನಾಯ್ಕ, ಸ್ತನ್ಯಪಾನ ಸಪ್ತಾಹ ಹಾಗೂ ಅದರ ಸದ್ವಿನಿಯೋಗ ಕುರಿತಂತೆ ಈಗಾಗಲೇ ಅಗತ್ಯವಿರುವ ಮಾರ್ಗದರ್ಶನವನ್ನು ಇಲಾಖೆ ಪರವಾಗಿ ನೀಡಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಸರ್ಕಾರ ಉಚಿತವಾಗಿ ಅನೇಕ ಪೌಷ್ಠೀಕಾಂಶದ ಆಹಾರ ನೀಡುತ್ತಾ ಬಂದಿದ್ದಾರೆ. ಯಾವುದೇ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಎಸ್.ಗಗನ, ಬಿ.ಸುವರ್ಣಮ್ಮ, ಎಚ್.ದುರುಗಮ್ಮ, ಎ.ಅಶ್ವಿನಿ, ಶಶಿಕಲಾ, ದ್ರಾಕ್ಷಾಣಿಮ್ಮ, ಚಂದನ, ನೂರ್ಜಾನ್, ಮೀನಾಕ್ಷಮ್ಮ, ಪಿ.ನಾಗವೇಣಿ, ಎಚ್.ಕವಿತಾ, ಸಂಧ್ಯಾ, ರಾಧಮ್ಮ, ಗ್ರಾಮಸ್ಥರಾದ ದ್ರಾಕ್ಷಾಯಿಣಿ, ಪೂರ್ಣಿಮ,ಸರೋಜಮ್ಮ ಮುಂತಾದವರು ಇದ್ದರು.