ಸಾರಾಂಶ
ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉಣಿಸುವುದು ಅತ್ಯಂತ ಅವಶ್ಯಕವಾಗಿದೆ. ಮಗುವಿಗೆ ತಾಯಿಯ ಎದೆಯ ಹಾಲು ಅಮೃತಕ್ಕೆ ಸಮಾನ ಎಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಹಣಮಂತ ಪ್ರಸಾದ್ ಹೇಳಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಉಣಿಸುವುದು ಅತ್ಯಂತ ಅವಶ್ಯಕವಾಗಿದೆ. ಮಗುವಿಗೆ ತಾಯಿಯ ಎದೆಯ ಹಾಲು ಅಮೃತಕ್ಕೆ ಸಮಾನ ಎಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಹಣಮಂತ ಪ್ರಸಾದ್ ಹೇಳಿದರು.ಇತ್ತೀಚೆಗೆ ನಗರದ ಹಳೇ ಜಿಲ್ಲಾ ಆಸ್ಪತ್ರೆಯಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ (ಐಎಪಿ) ಮತ್ತು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಯಿಮ್ಸ್ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ದಿನಾಚರಣೆಯ ನಿಮಿತ್ತ ನಡೆದ ಸಪ್ತಾಹ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್‌ನ ಅಧ್ಯಯನ ಶಿಫಾರಸ್ಸು ಪ್ರಕಾರ ಮಗು ಜನನದ ನಂತರ ಮೊದಲ ಗಂಟೆಯೊಳಗೆ ಸಾಧ್ಯವಾದಷ್ಟು ಬೇಗ ಸ್ತನ್ಯಪಾನವನ್ನು ಪ್ರಾರಂಭಿಸಬೇಕು. ಮೊದಲ ಆರು ತಿಂಗಳವರೆಗೆ ಕೇವಲ ಸ್ತನ್ಯಪಾನವನ್ನು ಮುಂದುವರಿಯಬೇಕು ಎಂದರು.ಆರು ತಿಂಗಳ ನಂತರ, ಸ್ತನ್ಯಪಾನದ ಜೊತೆಗೆ ಸೂಕ್ತ ಪೂರಕ ಆಹಾರವನ್ನು ಪ್ರಾರಂಭಿಸಬೇಕು. ಅದು ಎರಡು ವರ್ಷಗಳವರೆಗೆ ಅಥವಾ ಅದಕ್ಕೂ ಮೀರಿ ಮುಂದುವರಿಸಬೇಕು. ಸ್ತನ್ಯಪಾನವನ್ನು ಶಿಶುವಿಗೆ ಪಕೃತಿಯ ಅತ್ಯುತ್ತಮ ಕೊಡುಗೆ ಎಂದು ಪರಿಗಣಿಸಲಾಗುತ್ತದೆ. ಇದು ಮೊದಲ ಲಸಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಬಗ್ಗೆ ಮಕ್ಕಳ ತಜ್ಞರು, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ತನಪಾನದ ಮಹತ್ವ ಕುರಿತು ಗರ್ಭಿಣಿಯರಿಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ ಎಂದರು.
ಏಮ್ಸ್ ನ ಸರ್ಜನ್ ರಿಜ್ವಾನ್ ಅಫ್ರೀನ್ ಮತ್ತು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಯಾದಗಿರಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಶಾಂತ ಬಾಸುತ್ಕರ್ ಮಾತನಾಡಿದರು. ಈ ಸಂದರ್ಭದಲ್ಲಿ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಜಿಲ್ಲಾಧ್ಯಕ್ಷ ಡಾ. ಸುರೇಶ ಕುಮಾರ್, ಏಮ್ಸ್‌ನ ಡಾ. ಕುಮಾರ್ ಅಂಗಡಿ, ಡಾ. ಶಿವಕುಮಾರ್, ನೋಡಲ್ ಆಫಿಸರ್ ಡಾ. ಅಲ್ತಾಫ್ ಅತ್ತರ್ ಸೇರಿದಂತೆ ಏಮ್ಸ್ ಸಿಬ್ಬಂದಿಗಳು ಇದ್ದರು.