ಲಂಚ: ಲೋಕಾಯುಕ್ತ ಗಾಳಕ್ಕೆ ಬಿದ್ದ ಸಹಕಾರ ಅಧಿಕಾರಿ

| Published : Sep 03 2025, 01:00 AM IST

ಸಾರಾಂಶ

ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ಆಡಳಿತ ಮಂಡಳಿ ರಚಿಸಲು ಚುನಾವಣೆ ದಿನಾಂಕ ನಿಗದಿಪಡಿಸಲು ₹5 ಸಾವಿರಕ್ಕೆ ಬೇಡಿಕೆಯಿಟ್ಟು, ₹3 ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಸಹಕಾರ ಸಂಘಗಳ ಸಿಡಿಒ ಅಧಿಕಾರಿ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.

ದಾವಣಗೆರೆ: ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ಆಡಳಿತ ಮಂಡಳಿ ರಚಿಸಲು ಚುನಾವಣೆ ದಿನಾಂಕ ನಿಗದಿಪಡಿಸಲು ₹5 ಸಾವಿರಕ್ಕೆ ಬೇಡಿಕೆಯಿಟ್ಟು, ₹3 ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಸಹಕಾರ ಸಂಘಗಳ ಸಿಡಿಒ ಅಧಿಕಾರಿ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದಿದ್ದಾರೆ.

ಸಹಕಾರ ಸಂಘದ ಸಿಡಿಒ ಅಧಿಕಾರಿ ಸತೀಶ ನಾಯ್ಕ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದ ಆರೋಪಿ. ಹೊನ್ನಾಳಿ ತಾಲೂಕಿನ ಚೀಲಾಪುರ ಗ್ರಾಮದ ರೈತ ಸಿ.ಎಸ್. ದೇವರಾಜ (27) ತಮ್ಮ ಸೋದರ ಮಾವ ಲಿಂಗಾನಾಯ್ಕ ಪರವಾಗಿ ದಾವಣಗೆರೆ ಸಹಕಾರ ಸಂಘಗಳ ಒಕ್ಕೂಟದ ಕಚೇರಿಯಿಂದ ನಂದಿನಿ ಹಾಲು ಒಕ್ಕೂಟ ಸಹಕಾರ ಸಂಘದ ನೋಂದಣಿ ಪ್ರಮಾಣ ಪತ್ರ ಹಾಗೂ ಆದೇಶ ಪತ್ರ ಪಡೆದಿದ್ದರು. ಸಂಘದ ಆಡಳಿತ ಮಂಡಳಿ ರಚಿಸಲು ಚುನಾವಣಾ ದಿನಾಂಕ ನಿಗದಿಪಡಿಸಲು ಅಧಿಕಾರಿ ಸತೀಶ ನಾಯ್ಕಗೆ ಮನವಿ ಮಾಡಿದ್ದರು. ಆಗ ಅಧಿಕಾರಿಯು ಲಂಬಾಣಿ ಭಾಷೆಯಲ್ಲಿ ಮಾತನಾಡಿ ಲಂಚಕ್ಕೆ ಬೇಡಿಕೆಯಿಟ್ಟಿದರು. ಲಂಚದ ನೀಡಲು ಇಷ್ಟವಿಲ್ಲದ ಸಿ.ಎಸ್.ದೇವರಾಜ ಲೋಕಾಯುಕ್ತ ಪೊಲೀಸರಲ್ಲಿ ದೂರು ನೀಡಿದ್ದರು.

ಲೋಕಾಯುಕ್ತ ಎಸ್‌ಪಿ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಎಚ್.ಗುರುಬಸವರಾಜ, ಪಿ.ಸರಳ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆರೋಪಿ ಸಿಡಿಒ ಸತೀಶ ನಾಯ್ಕಗೆ ಬಂಧಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

- - -

-2ಕೆಡಿವಿಜಿ5: ಸತೀಶ ನಾಯ್ಕ, ಸಿಡಿಒ ಅಧಿಕಾರಿ.