ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾರತ ರತ್ನ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮ ದಿನದ ಅಂಗವಾಗಿ ಟೀಂ ಮೈಸೂರು ತಂಡದ ವತಿಯಿಂದ ಇಟ್ಟಿಗೆಗೂಡಿನ ಮಕ್ಕಳ ಉದ್ಯಾನವನದಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯನ್ನು1 ರಿಂದ 6ನೇ ತರಗತಿಯವರೆಗೆ 7 ರಿಂದ 10ನೇ ತರಗತಿಯವರೆಗೆ ಪಿಯುಸಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.ಮಾಜಿ ಮೇಯರ್‌ಶಿವಕುಮಾರ್ ಮತ್ತು ಇಟ್ಟಿಗೆಗೂಡಿನ ದುರ್ಗಾದೇವಿ ದೇವಸ್ಥಾನದ ಅಧ್ಯಕ್ಷ ವನರಾಜಣ್ಣ ಅವರು ಸ್ಪರ್ಧೆ ಉದ್ಘಾಟಿಸಿದರು. ಸ್ಪರ್ಧೆಯಲ್ಲಿ 160 ಮಕ್ಕಳು ಹಾಗೂ ಹಿರಿಯರು ಭಾಗವಹಿಸಿದ್ದರುಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ ಅವರು ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿದರು.1 ರಿಂದ 6ನೇ ತರಗತಿವರೆಗಿನ ವಿಭಾಗದಲ್ಲಿ ಸ್ನೇಹಾರ್ಚನ, ನಿರ್ಮಲ ಕಾನ್ವೆಂಟ್ ನ 5ನೇ ತರಗತಿಯ ಸ್ನೇಹಾರ್ಚನ ಪ್ರಥಮ, ಭಾರತೀಯ ವಿದ್ಯಾಭವನದ 6ನೇ ತರಗತಿ ವಿದ್ಯಾರ್ಥಿನಿ ತೀರ್ಥ ಡಿ ಸೋನಿ ದ್ವಿತೀಯ, ಕೇಂದ್ರೀಯ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿ ನಮಿತ್ ಜಿ. ಲೀಡ್ಸ್ ತೃತೀಯ ಬಹುಮಾನ ಪಡೆದರು.7 ರಿಂದ 10ನೇ ತರಗತಿ ವಿಭಾಗದಲ್ಲಿ ಸೋಸಲೆ ಆದರ್ಶ ವಿದ್ಯಾಲಯದ ವಿ. ಜಗದೀಶ್‌ಪ್ರಥಮ, ಕ್ಯಾಪಿಟಲ್ ಪಬ್ಲಿಕ್‌ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಪಾವನಿ ದ್ವಿತೀಯ, ಎಸ್.ಜೆ.ಸಿ. ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಎಸ್. ಕ್ಷಿತಿ ತೃತೀಯ ಬಹುಮಾನ ಪಡೆದರು.ಪಿಯುಸಿ ಮತ್ತು ಮೇಲ್ಪಟ್ಟವರ ವಿಭಾಗದಲ್ಲಿ ಬಿಜಿಎಸ್‌ಪಿಯು ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಬಿ. ತೇಜಸ್ವಿನಿ ಪ್ರಥಮ, ಕಾವಾದ ಕೆ. ಸುನಿಲ್‌ಕುಮಾರ್ ದ್ವಿತೀಯ, ಜಿಟಿಟಿಸಿ ಕಾಲೇಜಿನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಎಂ. ಅಮೃತ್ ತೃತೀಯ ಬಹುಮಾನ ಪಡೆದರು.ಸ್ಥಳಿಯ ಮುಖಂಡರಾದ ಸುಂದರ್ ಮೂರ್ತಿ, ಪ್ರಭಾಕರ್ ಸಿಂಧೆ, ನವೀನ್, ಹರೀಶ್, ಕೃಷ್ಣ, ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್, ಕಿರಣ್ ಜೈ ರಾಮೇಗೌಡ, ಅನಿಲ್ ಜೈನ್, ಹಿರಿಯಣ್ಣ, ರಾಮಪ್ರಸಾದ್, ಪ್ರಸನ್ನ ರಾಘವೇಂದ್ರ ರಾಜಗುರು, ಮನೋಹರ, ಹರೀಶ್ ಶೆಟ್ಟಿ, ಮಂಜು ಹುಣಸೂರು, ಹೇಮಂತ್ ಸಿ. ಗೌಡ, ಮನೋಜ್ ವಸಂತ್, ಸುಕೃತ, ಸಹನಾ, ಉಮಾ, ಜ್ಯೋತಿ, ಶಾಂತಕುಮಾರಿ, ನಂದಿನಿ, ಕಾವೇರಿ ಇದ್ದರು.ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಗಲಿ ಭಾಸ್ಕರ್ ಹಾಗೂ ಸಚ್ಚಿದಾನಂದ ಕಾರ್ಯನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))