ನಾಪೋಕ್ಲು: ಅಮೆರಿಕದ ಯುವತಿ ಹಾಗೂ ಸಂಪಾಜೆಯ ಯುವಕ ಸಂಪಾಜೆ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಂಪಾಜೆ ಗ್ರಾಮದ ಗೂನಡ್ಕ ಬೀಜದ ಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋಲ್ ಅವರು ಇತ್ತೀಚೆಗೆ ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸತಿ ಪತಿಗಳಾದರು.ವಧು-ವರ ಇಬ್ಬರೂ ಇಸ್ಕಾನ್ ಪರಂಪರೆಯ ಕೃಷ್ಣ ಭಕ್ತರಾಗಿದ್ದು, ಪರಸ್ಪರ ಇಷ್ಟಪಟ್ಟು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ವರ ಸಾಯಿ ಸಂಕೇತ್ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದ್ದರು. ಅದೇ ಅವಧಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅಮೆರಿಕದ ಶಾನೋನ್ ಮಾಯಾಪುರದಲ್ಲಿ ನೆಲೆಸಿ ಆನ್ ಲೈನ್ ವಹಿವಾಟು ನಡೆಸುತ್ತಿದ್ದರು.
ಸಂಕೇತ್ ಅವರ ಉದ್ಯಮ ಮಳಿಗೆಗೆ ಭೇಟಿ ನೀಡುತ್ತಿದ್ದ ಶಾನೋಲ್ ಪ್ರೀತಿಸಿ ಸಾಯಿ ಸಂಕೇತ್ ಅವರನ್ನು ವರಿಸಿದ್ದಾರೆ.