ಹುಬ್ಬಳ್ಳಿ:

ಹೆಬಸೂರ-ಬೆನ್ನೂರ ಸಂಪರ್ಕ ಸಾಧಿಸಲು ಬೆಣ್ಣೆಹಳ್ಳಕ್ಕೆ ನೂತನ ಸೇತುವೆ, ಕನಕ ಭವನ, ಶಾದಿ ಮಹಲ್‌ ಕಟ್ಟಡ ಕಾಮಗಾರಿಗೆ ಶಾಸಕ ಎನ್‌.ಎಚ್‌. ಕೋನರಡ್ಡಿ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಹೆಬಸೂರ-ಬೆನ್ನೂರ ನಡುವೆ ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ 2 ಗ್ರಾಮಗಳ ನಡುವೆ ಸಂಪರ್ಕವೇ ತಪ್ಪಿ ಹೋಗುತ್ತಿತ್ತು. ಅದಕ್ಕಾಗಿ ರೈತರು ಹಾಗೂ ಗ್ರಾಮಸ್ಥರು ಮನವಿ ಮೇರೆಗೆ ಈ ಸೇತುವೆ ಕಾರ್ಯ ಕೈಗೊಳ್ಳಲಾಗುತ್ತಿದೆ. ಸೇತುವೆ ನಿರ್ಮಾಣದಿಂದ ಈ ಸಮಸ್ಯೆ ದೂರವಾಗಲಿದೆ ಎಂದರು.

ಕುರುಬ ಸಮಾಜದ ಬಹುದಿನದ ಬೇಡಿಕೆಯಂತೆ ಬೀರದೇವರ ಕನಕ ಭವನ ನಿರ್ಮಾಣಕ್ಕೆ ₹30 ಲಕ್ಷ ಹಾಗೂ ಮುಸ್ಲಿಂ ಸಮಾಜದ ಮನವಿ ಮೇರೆಗೆ ಶಾದಿಮಹಲ್‌ ಕಟ್ಟಡಕ್ಕೆ ₹ 50 ಲಕ್ಷ ಅನುದಾನದಲ್ಲಿ ಭೂಮಿಪೂಜೆ ಮಾಡಿರುವುದು ಹೆಮ್ಮೆ ವಿಷಯ ಎಂದು ಹೇಳಿದರು.ಕುಸುಗಲ ಗ್ರಾಮದ ಸಿದ್ಧಾರೂಢ ಮಠದ ಶ್ರೀಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ಮಂಜುನಾಥ ಮುದರಡ್ಡಿ, ಮೋನಪ್ಪ ಗಡ್ಡಿ, ಪಾಂಡಪ್ಪ ಹೊಸಮನಿ, ಗೋಪಣ್ಣ ನಲವಡಿ, ಚಾಂದಸಾಬ್ ನದಾಫ, ಈರಪ್ಪ ಇಸರಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.