ಸಾರಾಂಶ
ಕಳೆದ ವರ್ಷದಲ್ಲಿ ಕೆಡವಿ ವಿನೂತನ ಸೇತುವೆ ನಿರ್ಮಾಣ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಬಾಳೆಹೊನ್ನೂರು-ಎನ್.ಆರ್.ಪುರ ಮುಖ್ಯರಸ್ತೆ ವಾಟುಕೊಡಿಗೆ ಬಳಿ ಕಳೆದ ವರ್ಷ ನಿರ್ಮಿಸಿದ ನೂತನ ಸೇತುವೆ ತಳಭಾಗದಲ್ಲಿ ಮಣ್ಣು ಕುಸಿತಗೊಂಡಿದ್ದು, ಇದರಿಂದ ಸೇತುವೆಗೆ ಹಾನಿಯಾಗಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ.ವಾಟುಕೊಡಿಗೆ ಮುಖ್ಯರಸ್ತೆಯಲ್ಲಿ ಕಿರಿದಾಗಿ ಇದ್ದ ಸೇತುವೆ ಕಳೆದ ವರ್ಷ ಕೆಡವಿ ನೂತನವಾಗಿ ರು.1 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿ ಕಳೆದ ಕೆಲ ತಿಂಗಳ ಹಿಂದೆ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.ಇದೀಗ ಕಳೆದ ಕೆಲ ದಿನಗಳ ಹಿಂದೆ ನೂತನ ಸೇತುವೆ ಕೆಳಭಾಗದಲ್ಲಿ ಹಾಕಿರುವ ಮಣ್ಣು ಒಂದು ಬದಿಯಿಂದ ಸ್ವಲ್ಪ ಪ್ರಮಾಣದಲ್ಲಿ ಕುಸಿತಗೊಂಡು ಗುಂಡಿ ಬಿದ್ದಿದ್ದು, ಸೇತುವೆಗೆ ಹಾನಿಯಾಗುವ ಆತಂಕ ಎದುರಾಗಿದೆ.ಮಳೆ ಆರಂಭಗೊಂಡಲ್ಲಿ ಅಥವಾ ಅಧಿಕ ಭಾರ ಹೊತ್ತ ವಾಹನಗಳು ಹೆಚ್ಚಾಗಿ ಸಂಚರಿಸಿದರೆ ಮಣ್ಣು ಹೆಚ್ಚಾಗಿ ಕುಸಿದು ಸೇತುವೆಗೆ ತೀವ್ರವಾಗಿ ಹಾನಿಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗುಂಡಿಬಿದ್ದ ಜಾಗದಲ್ಲಿ ದುರಸ್ಥಿ ಮಾಡಿಸಿ ಹೊಸ ಸೇತುವೆಗೆ ಯಾವುದೇ ಹಾನಿಯಾಗದ ಹಾಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
೧೭ಬಿಹೆಚ್‌ಆರ್ ೨: ಬಾಳೆಹೊನ್ನೂರು-ಎನ್.ಆರ್.ಪುರ ಸಂಪರ್ಕ ಕಲ್ಪಿಸುವ ವಾಟುಕೊಡಿಗೆ ಬಳಿ ನೂತನವಾಗಿ ನಿರ್ಮಿಸಿರುವ ಸೇತುವೆಯ ಒಂದು ಬದಿಯಲ್ಲಿ ಮಣ್ಣು ಕುಸಿತಗೊಂಡು ಗುಂಡಿ ಬಿದ್ದಿರುವುದು.