ಸಾರಾಂಶ
ಮಳೆ ನೀರಿನ ರಭಸದಿಂದ ಮೀರಖಲ್ ಗ್ರಾಮ ಹಾಗೂ ಗೌರ ಗ್ರಾಮದ ಬಳಿ ರಸ್ತೆ ಜೊತೆಗೆ ಸೇತುವೆ ಕೂಡ ಕೊಚ್ಚಿಹೊಗಿದ್ದು ಸಂಚಾರ ಸ್ಥಗಿತಗೊಂಡಿತ್ತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣತಾಲೂಕಿನಲ್ಲಿ ಬುಧವಾರ ಸಂಜೆ ಧಾರಾಕರ ಮಳೆಯಾಗಿದ್ದು ಬಸವಕಲ್ಯಾಣ ತಾಲೂಕಿನಲ್ಲಿ ಮಳೆಯಿಂದ ತಾಲೂಕಿನ ಮೀರಖಲ್-ಗೌರ ಮಧ್ಯದ ಸೇತುವೆ ಕೊಚ್ಚಿ ಹೋಗಿದ್ದು ಗುರುವಾರ ಬೆಳಿಗ್ಗೆ ಶಾಸಕ ಶರಣು ಸಲಗರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಸವಕಲ್ಯಾಣ, ಹುಲಸೂರ ಸೇರಿದಂತೆ ತಾಲೂಕಿನಲ್ಲಿ ಸಂಜೆ ಗಂಟೆಯಿಂದ ತಡರಾತ್ರಿವರೆಗೆ ಸುರಿದ ಮಳೆಗೆ ಬಸವಕಲ್ಯಾಣ ನಗರದ ಹಲವು ಬಡಾವಣೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿತು. ರಸ್ತೆಗಳಲ್ಲಿ ಮಳೆ ನೀರು ತುಂಬಿಕೊಂಡ ಪರಿಣಾಮ ವಾಹನ ಸವಾರರು ರಸ್ತೆ ಕಾಣದೆ ಕೆಲ ಹೊತ್ತು ಪರದಾಡುವಂತಾಗಿತ್ತು. ಕೆಲ ತಗ್ಗು ಪ್ರದೇಶದ ಅಂಗಡಿಗಳಿಗೂ ನೀರು ನುಗ್ಗಿವೆ ಎಂದು ಹೇಳಲಾಗಿದೆ.
ಮಳೆ ನೀರಿನ ರಭಸದಿಂದ ಮೀರಖಲ್ ಗ್ರಾಮ ಹಾಗೂ ಗೌರ ಗ್ರಾಮದ ಬಳಿ ರಸ್ತೆ ಜೊತೆಗೆ ಸೇತುವೆ ಕೂಡ ಕೊಚ್ಚಿಹೊಗಿದ್ದು ಸಂಚಾರ ಸ್ಥಗಿತಗೊಂಡಿತ್ತು. ಗುರುವಾರ ಶಾಸಕ ಶರಣು ಸಲಗರ ಅವರು ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿ ಗ್ರಾಮಮಸ್ಥರಿಂದ ಮಾಹಿತಿ ಪಡೆದರು.ಶಾಸಕ ಶರಣು ಸಲಗರ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ, ಸ್ಥಗಿತಗೊಂಡ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಅಲ್ಲದೇ ತಾತ್ಕಾಲಿಕ ರಸ್ತೆ ಸುಧಾರಣೆಗೆ ಮುಂದಾಗಬೇಕೆಂದು ಸೂಚಿಸಿದರು.--ಚಿತ್ರ 22ಬಿಡಿಆರ್50ಬಸವಕಲ್ಯಾಣ ತಾಲೂಕಿನಲ್ಲಿ ಮಳೆಗೆ ಕೊಚ್ಚಿಹೊದ ಸೇತುವೆಯನ್ನು ಗುರುವಾರ ಶಾಸಕ ಶರಣು ಸಲಗರ ವೀಕ್ಷಿಸಿದರು.--