ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ವಿದ್ಯಾರ್ಥಿಗಳು ವ್ಯರ್ಥ ಸಮಯ ಹಾಳು ಮಾಡದೇ ಓದಿನ ಕಡೆ ಗಮನ ಹರಿಸಬೇಕು. ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಹೇಳಿದರು.ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭ್ಯುದಯ ಬ್ರಿಲಿಯಂಟ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಬಹುಮಾನ ನೀಡಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಎಲ್ಲ ರಂಗಗಳಲ್ಲಿಯೂ ಪ್ರತಿನಿಧಿಸುವ ಮೂಲಕ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಈ ದೆಸೆಯಲ್ಲಿಯೇ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಉದ್ದೇಶದಿಂದ ಬ್ರಿಲಿಯಂಟ್ ಅವಾರ್ಡ್ ಸ್ಪರ್ಧಾತ್ಮಕ ಪರೀಕ್ಷೆ ಏರ್ಪಡಿಸಲಾಗಿದೆ. ತೀವ್ರ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ವಸತಿ ಸಮೇತ ಯಾವುದೇ ಶುಲ್ಕ ಪಡೆಯದೇ ನಮ್ಮ ಸಂಸ್ಥೆಯಿಂದ ಉಚಿತ ಶಿಕ್ಷಣ ನೀಡಲಾಗುವುದು. ಕಳೆದ ಕೊರೋನಾ ಸಂದರ್ಭದಲ್ಲಿ ಪಾಲಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ೨ ಸಾವಿರ ಮಕ್ಕಳಿಗೆ ಉಚಿತ ಪ್ರವೇಶ ಪಡೆದು ಶಿಕ್ಷಣ ನೀಡಿದ್ದು ನಮ್ಮ ಸಂಸ್ಥೆಯ ಹೆಮ್ಮೆಯ ವಿಷಯವಾಗಿದೆ ಎಂದರು.
ಪ್ರಾಂಶುಪಾಲ್ ಬಿ.ಜಿ.ಬಿರಾದಾರ, ಉಪನ್ಯಾಸಕರಾದ ಪ್ರಶಾಂತ ಬಿರಾದಾರ, ಮುನೀರ ನಾಯಕ, ಎ.ಎಫ್.ಭೂವಾಜಿ, ಕೆ.ಬಿ.ರೂಡಗಿ, ಸೂರಜ್ ತಳವಾರ, ರಂಗಸ್ವಾಮಿ ಎಸ್, ಅವಿನಾಶ ತಾಳಿಕೋಟಿ, ಎನ್.ಟಿ.ಗೌಡರ, ರವಿ ಚಲವಾದಿ, ಎಂ.ಚಂದ್ರಶೇಖರ, ಪಿ.ನರೇಶ, ನಿವೇದಿತಾ ದೇಶಪಾಂಡೆ, ಎಚ್.ಎಸ್.ಗೌಡರ, ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಕಿರಣ ಮದರಿ ಹಾಗೂ ರವಿ ಜಗಲಿ ಸೇರಿದಂತೆ ಹಲವರು ಇದ್ದರು.ಬಾಕ್ಸ್ಟಾಪ್ ಟೆನ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಈ ವೇಳೆ ಒಟ್ಟು ೫೦೦ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬ್ರಿಲಿಯಂಟ್ ಅವಾರ್ಡ್ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಭೂಮಿಕಾ ಜುಮನಾಳ, ಮುತ್ತು ಮಸರಕಲ್ಲ, ಮಲ್ಲಿಕಾರ್ಜುನ ಹಾವರಗಿ, ತೇಜಸ್ ಪಾಟೀಲ, ಕಾಶಿಂಬಿ ಮುಲ್ಲಾ, ಸೌಜನ್ಯಾ ಹಿರೇಮಠ, ನಿಖಿಲಕುಮಾರ ಚವ್ಹಾಣ, ಶ್ರೀರಾಮ ಒಡ್ಡರ, ಮಹಮ್ಮದ ಖಾನ, ಲಕ್ಷ್ಮೀ ಅಡಗಿಮನಿ ಬ್ರಿಲಿಯಂಟ್ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೇರಿದಂತೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು. 2ನೇ ಸ್ಥಾನ ಪಡೆದ ರಂಜಿತಾ ಕುರಿ, ಶ್ರೇಯಾ ಉತ್ನಾಳ, ನಾಗೇಶ ಹೂಗಾರ, ದಿವ್ಯಾಶ್ರೀ ಗುರಿಕಾರ, ಅಭಯ ಬಸರಕೋಡ ಐದು ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಶೇ.೫೦ರಷ್ಟು ಶುಲ್ಕ ಕಡಿತಗೊಳಿಸಲಾಗುವುದು. ತೃತೀಯ ಸ್ಥಾನ ಪಡೇದ ಭರತಕುಮಾರ ಬಿರಾದಾರ,. ಮಹಮ್ಮದ ಸಿರಾಜ ಮುಂಬೈ, ಪವನ್ ಮೇಟಿ, ರೋಹನ ಸೂಳಿಭಾವಿ, ಅಭಿಷೇಕ ಮೇಟಿ, ಶ್ರೇಯಸ್ ಕಾಟೆಗಾರ, ಮೋಹನಕುಮಾರ ಪತ್ತಾರ, ಆಸಿಯಾ ಕೇಸಾಪೂರ, ಭವಾನಿ ಬನ್ನಪ್ಪನವರ, ದೇವರಾಜ ರಾಠೋಡ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಶೇ.೨೦ ಶುಲ್ಕ ವಿನಾಯಿತಿ ನೀಡಲಾಗುವುದು. ಸ್ಪಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಶೇ.೧೦ರಷ್ಟು ವಿನಾಯತಿಗೆ ಅರ್ಹರಾಗಿದ್ದಾರೆ. ಈ ವೇಳೆ ೧೦ ಟಾಪ್ ಬ್ರಿಲಿಯಂಟ್ ಅವಾರ್ಡ್ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ೨೦೨೩-೨೪ನೇ ಸಾಲಿನ ಪಿಯುಸಿ ಫಲಿತಾಂಶ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಸನ್ಮಾನಿಸಿ ಬಹುಮಾನ ನೀಡಿ ಗೌರವಿಸಲಾಯಿತು.