ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನೀವು ಚಳವಳಿ ಮಾಡುವ ಮುನ್ನ ನಮ್ಮ ಗಮನಕ್ಕೆ ತನ್ನಿ, ನಿಮ್ಮ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ, ನಾವು ಸ್ಪಂದಿಸದ ಪಕ್ಷದಲ್ಲಿ ನೀವು ಹೋರಾಟ ಮಾಡಿ. ರೈತರಿಗೆ ಸದಾಕಾಲ ಸ್ಪಂದಿಸಲು ನಾವು ಸಿದ್ಧರಿದ್ದೇವೆ. ಹಾಗಾಗಿ ರೈತರು ತಾಲೂಕು ಆಡಳಿತ, ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ಹೇಳಿದರು.ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ರೈತರ ಸಮಸ್ಯೆಗೆ ನಾವು ಸದಾಕಾಲ ಸ್ಪಂದಿಸುತ್ತೇವೆ. ರೈತರ ಬೇಡಿಕೆಯಂತೆ ಹಲವು ಬಸ್‌ಗಳು ದೊಡ್ಡಿಂದುವಾಡಿ ಗ್ರಾಮ ಪ್ರವೇಶಿಸಿ ತೆರಳುವಂತೆ ಡಿಪೋ ಅದಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾನ್ ಸ್ಟಾಪ್ ಬಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್‌ಗಳು ಎಂದಿನಂತೆ ಸತ್ತೇಗಾಲ ಗ್ರಾಮ ಕ್ರಮಿಸಿ ತೆರಳುವಂತೆ ಸೂಚಿಸಲಾಗಿದೆ. ಈಗಾಗಲೇ ರೈತ ಮುಖಂಡರು ಈ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದ ಹಿನ್ನೆಲೆ ಕ್ರಮವಹಿಸಲಾಗಿದೆ. ಸೂಚನೆಯಂತೆ ನಿರ್ವಾಹಕರು ಇದನ್ನು ಪಾಲಿಸದಿದ್ದರೆ ಅವರ ಮೇಲೆ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಪತ್ರ ಬರೆಯುವೆ ಎಂದರು.
ಫಸಲ್ ಬೀಮಾ ಯೋಜನೆಯ ನಿಯಮ ಸಡಿಲಕ್ಕೆ ಡಿಸಿಗೆ ಪತ್ರ:ಈಗಾಗಲೇ ಹಲವು ರೈತರು ಫಸಲ್ ಬೀಮಾ ಯೋಜನಾ ವಿಮಾ ವ್ಯಾಪ್ತಿಗೆ ಜೋಳ, ಬಾಳೆ ಸೇರಿದಂತೆ ಕೆಲ ಬೇಳೆಗಳಿಗೆ ವಿಮಾ ಯೋಜನೆ ಅನ್ವಯಿಸಲ್ಲ ಎಂಬ ರೈತರ ಮನವಿಯನ್ನು ನಾನು ಪರಿಗಣಿಸಿದ್ದೆನೆ. ಈ ಸಂಬಂಧ ರೈತರ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಅದೇ ರೀತಿಯಲ್ಲಿ ರೈತರು ತಾವು ಬೆಳೆದ ಬೇಳೆಗಳು ಹಾಳಾಗದಂತೆ, ಒಂದು ವೇಳೆ ಬೇಳೆ ಹಾಳಾದರಕೆ ವಿಮಾ ಮಾಡಿಸುವ ಮೂಲಕ ಸಹಕರಿಸಿ, ವಿಮೆಯಿಂದ ರೈತರಿಗೆ ಸಾಕಷ್ಟು ಅನುಕೂಲಗಳಿವೆ ಎಂದರು. ಈಗಾಗಲೇ ಲಕ್ಷಾಂತರ ಹಣ ವ್ಯಯಿಸಿ ಕಬ್ಬು, ಬಾಳೆ ಬೆಳೆದ ರೈತರ ಬೆಳೆ ನಷ್ಟವಾಗಿದ್ದು ನನ್ನ ಗಮನದಲ್ಲಿದೆ. ಫಸಲ್ ಬೀಮಾ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು ಕ್ರಮವಹಿಸಲಾಗುವುದು ಎಂದು ಹೇಳಿದರು.
"ರೈತರು ವಿಮಾ ಮಾಡಿಸಲು ಮುಂದಾದರೆ ಬಾಳೆ, ಕಬ್ಬಿಗೆ ಫಸಲ್ ಬೀಮಾ ಯೋಜನೆ ಅನ್ವಯವಾಗಲ್ಲ ಎನ್ನುತ್ತಾರೆ. ಈ ನೀತಿ ತಿದ್ದುಪಡಿಯಾಗಬೇಕು. ಬಾಳೆ, ಕಬ್ಬಿಗೂ ಫಸಲ್ ಬೀಮಾ ಯೋಜನೆ ವಿಮಾ ಅನ್ವಯವಾಗುವಂತೆ ಅಧಿಕಾರಿಗಳು ಗಮನಹರಿಸಬೇಕು, ಈ ನೀತಿ ಸಡಿಲೀಕರಣವಾಗಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಬೇಕು ".ಶೈಲೇಂದ್ರ, ರೈತ ಮುಖಂಡ