Bring the Modi government's series of frauds to the people.
-ಜಿಲ್ಲೆಯಾದ್ಯಂತ ಪ್ರವಾಸ
-ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಹೇಳಿಕೆ । ಎಂ.ನಿಶ್ಚಿತ್ ಪದಗ್ರಹಣ ಸಮಾರಂಭಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಪ್ರಧಾನಿ ಮೋದಿ ಹಸಿ ಸುಳ್ಳುಗಳ ಮೂಲಕ ದೇಶದ ಜನರನ್ನು ವಂಚಿಸಿರುವ ಸಂಗತಿಗಳ ಪ್ರತಿಮನೆಗಳ ತಲುಪಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಹೇಳಿದರು.ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ನಿಶ್ಚಿತ್(ಚಿಂಟು) ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಯೂತ್ ಕಾಂಗ್ರೆಸ್‍ನ್ನು ಶಕ್ತಿಶಾಲಿಯನ್ನಾಗಿಸಲಾಗುವುದು. ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆಸಿರುವುದು ಕಾಂಗ್ರೆಸ್‍ಗೆ ಬಲ ಬಂದಂತಾಗಿದೆ ಎಂದರು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ಐದು ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ಕೊಟ್ಟಿದೆ. ಪ್ರತಿ ವರ್ಷವೂ ಯುವಕರ ಸಂಘಕ್ಕೆ ಹತ್ತು ಲಕ್ಷ ರು.ಗಳನ್ನು ನೀಡುತ್ತದೆ. ಇದನ್ನು ಬಳಸಿಕೊಂಡು ಯೂತ್ ಕಾಂಗ್ರೆಸ್‍ನ್ನು ಸಂಘಟಿಸುವಂತೆ ಎಂ. ನಿಶ್ಚಿತ್‍ಗೆ ಸೂಚಿಸಿದರು.ರಾಜಕಾರಣ ಯಾರ ಸ್ವತ್ತಲ್ಲ. ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ನಿಶ್ಚಿತ್‍ಗೆ ನಾಯಕತ್ವದ ಗುಣವಿದೆ. ಇದರಿಂದ ಪಕ್ಷಕ್ಕೆ ಶಕ್ತಿ ಬರುತ್ತದೆಂದು ನಂಬಿದ್ದೇನೆ. ಪ್ರತಿಯೊಂದು ಮನೆಯಲ್ಲಿಯೂ ಕಾಂಗ್ರೆಸ್ ಕೊಡುಗೆಯಿದೆ ಎನ್ನುವುದನ್ನು ಯೂತ್ ಕಾಂಗ್ರೆಸ್‍ನವರು ಜನತೆಗೆ ತಿಳಿಸಬೇಕೆಂದು ಕಾರೆಹಳ್ಳಿ ಉಲ್ಲಾಸ್ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‍ಪೀರ್ ಮಾತನಾಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಹೆಚ್. ಆಂಜನೇಯ ಅವರೆಲ್ಲಾ ಯೂತ್ ಕಾಂಗ್ರೆಸ್‍ನಿಂದ ಬೆಳೆದವರು. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದು, ಕಾಂಗ್ರೆಸ್ ಪಕ್ಷ. ದೇಶದ ಮುಂದಿನ ಪ್ರಧಾನಿ ರಾಹುಲ್‍ಗಾಂಧಿಗೆ ಯೂತ್ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಬಲ ಬೇಕು. ಸಂವಿಧಾನದಲ್ಲಿ ಎಲ್ಲಾ ಜಾತಿ ಧರ್ಮದವರಿಗೆ ಸಮಾನ ಅವಕಾಶವಿದೆ. ಹದಿನೆಂಟು ವರ್ಷದವರಿಗೂ ಮತದಾನದ ಹಕ್ಕು ನೀಡಿದ್ದು ರಾಜೀವ್‍ಗಾಂಧಿ ಎನ್ನುವುದನ್ನು ಸ್ಮರಿಸಿಕೊಂಡರು.ಹದಿನೆಂಟು ವರ್ಷ ತುಂಬಿದವರು ನಿಮ್ಮ ನಿಮ್ಮ ವಾರ್ಡ್, ಬೂತ್‍ಗಳಲ್ಲಿ ಮತದಾನದ ಹಕ್ಕು ಪಡೆದುಕೊಳ್ಳಿ. ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವವರ ಹೆಸರುಗಳನ್ನು ಸೇರಿಸುವುದು ನಿಮ್ಮ ಹೊಣೆ. ಪಕ್ಷ, ದೇಶದ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಿ ಎಂದು ಯೂತ್ ಕಾಂಗ್ರೆಸ್‍ನವರಿಗೆ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಿ.ಟಿ. ವೆಂಕಟೇಶ್ ಮಾತನಾಡಿ ರಾಹುಲ್‍ಗಾಂಧಿ ಪ್ರಧಾನ ಮಂತ್ರಿಯಾಗಬೇಕಾದರೆ ಯೂತ್ ಕಾಂಗ್ರೆಸ್‍ನವರು ಸಂಘಟಿತರಾಬೇಕು. ಕಾಂಗ್ರೆಸ್ ಬಡವರ ಪಕ್ಷ. ಯೂತ್ ಕಾಂಗ್ರೆಸ್‍ಗೆ ಅಸ್ತಿತ್ವವಿದೆ. ದೇಶ, ಸಂವಿಧಾನ ಉಳಿಯಬೇಕಾಗಿರುವುದರಿಂದ ರಾಹುಲ್‍ಗಾಂಧಿಯನ್ನು ಪ್ರಧಾನಿಯನ್ನಾಗಿಸಿ ಎಂದು ವಿನಂತಿಸಿದರು.ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಎಂ.ನಿಶ್ಚಿತ್, ಕಾರೆಹಳ್ಳಿ ಉಲ್ಲಾಸ್‍ರವರು ನನ್ನ ಮೇಲೆ ವಿಶ್ವಾಸ ನಂಬಿಕೆಯಿಟ್ಟು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದ ರೀತಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‍ನ್ನು ಬಲಪಡಿಸಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಡಿ.ಎನ್.ಮೈಲಾರಪ್ಪ, ಜಿ.ವಿ.ಮಧುಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಚಾಂದ್‍ಪೀರ್, ಯೂತ್ ಕಾಂಗ್ರೆಸ್‍ನ ನಿಜಾಮುದ್ದಿನ್, ಪ್ರಶಾಂತ್, ಪವನ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಇದ್ದರು.-------------
ಪೋಟೋ ಕ್ಯಾಪ್ಸನ್ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕಾರೆಹಳ್ಳಿ ಉಲ್ಲಾಸ್ ಮಾತನಾಡಿದರು
-------ಫೋಟೋ ಫೈಲ್ ನೇಮ್ 7 ಸಿಟಿಡಿ 2--