ಅತೀಯಾಗಿ ಮಾತ್ರೆ ಸೇವಿಸಿಬ್ರಿಟನ್‌ ವ್ಯಕ್ತಿ ಸಾವಿಗೆ ಶರಣು

| Published : Aug 04 2024, 01:20 AM IST

ಅತೀಯಾಗಿ ಮಾತ್ರೆ ಸೇವಿಸಿಬ್ರಿಟನ್‌ ವ್ಯಕ್ತಿ ಸಾವಿಗೆ ಶರಣು
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶಿ ಪ್ರಜೆಯೊಬ್ಬರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವನದಲ್ಲಿ ಜಿಗುಪ್ಸೆಗೊಂಡು ವಿದೇಶಿ ಪ್ರಜೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ರಿಟನ್ ದೇಶದ ಗೇವಿನ್ ಜೇಮ್ಸ್ ಯಂಗ್ (59) ಮೃತ ದುರ್ದೈವಿ. ಕೋರಮಂಗಲದ 7ನೇ ಹಂತದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ. ನಾಲ್ಕೈದು ದಿನಗಳ ಹಿಂದೆ ಅತಿಯಾದ ಮಾತ್ರೆಗಳ ಸೇವನೆಯಿಂದ ಜೇಮ್ಸ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ಜೇಮ್ಸ್‌ ಅವರು, ಜುಲೈ ಮೊದಲ ವಾರ ನಗರಕ್ಕೆ ಆಗಮಿಸಿದ್ದರು. ಆನ್‌ಲೈನ್‌ ಮೂಲಕ ಕೋರಮಂಗಲದಲ್ಲಿ ಬಾಡಿಗೆ ಮನೆಗೆ ಪಡೆದು ಅವರು ನೆಲೆಸಿದ್ದರು. ಜು.27ರಂದು ತಮ್ಮ ಮನೆ ಮಾಲೀಕರಿಗೆ ಕರೆ ಮಾಡಿ ತನ್ನನ್ನು ಆ.1ವರೆಗೆ ತೊಂದರೆ ಮಾಡಬೇಡಿ ಎಂದು ಜೇಮ್ಸ್ ಹೇಳಿದ್ದರು. ಹೀಗಾಗಿ ಯಾರೂ ಆತನನ್ನು ಮಾತನಾಡಿಸಿರಲಿಲ್ಲ. ಕೊನೆಗೆ ಶನಿವಾರ ಬೆಳಗ್ಗೆ ಜೇಮ್ಸ್‌ಗೆ ಮನೆ ಮಾಲಿಕರು ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಮನೆ ಬಳಿ ಬಂದಾಗ ದುರ್ವಾಸನೆ ಬಂದಿದೆ. ಇದರಿಂದ ಆತಂಕಗೊಂಡ ಅವರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮನೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಮಲಗುವ ಕೋಣೆಯ ಹಾಸಿಗೆ ಮೇಲೆ ಜೇಮ್ಸ್ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.ಡೆತ್‌ ನೋಟ್ ಪತ್ತೆ: ಮೃತನ ಮನೆಯಲ್ಲಿ ಡೆತ್ ನೋಟ್‌ ಪತ್ತೆಯಾಗಿದ್ದು, ಇದರಲ್ಲಿ ತಮ್ಮ ಆತ್ಮಹತ್ಯೆ ನಿರ್ಧಾರದ ಬಗ್ಗೆ ಅವರು ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.