ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅ.11 ರಿಂದ 21ರವರೆಗೆ ನಡೆಯುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಇಲ್ಲಿನ ಹರಳಯ್ಯನವರ ಗವಿಯಲ್ಲಿ ಅ.11 ರಿಂದ 21ರವರೆಗೆ ನಡೆಯುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.

ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಾನ್ನಿಧ್ಯ ವಹಿಸಿ ಮಾತನಾಡಿ, ಅ.11ರಂದು ಮುಂಜಾನೆ 8 ಗಂಟೆಗೆ ಆರಂಭೋತ್ಸವ ಸಾಯಂಕಾಲ 6 ಗಂಟೆಗೆ ಉದ್ಘಾಟನೆ ನಡೆಯುವುದು. ಅ.12ರಂದು ಸಾಯಂಕಾಲ ಮಾಜಿ ಸೈನಿಕರ ಸಮಾವೇಶ, 13ರಂದು ಮಹಾ ಶಕ್ತಿಕೂಟಗಳ ಸಮಾವೇಶ, ಅ.14ರಂದು ಸಾಯಂಕಾಲ ಅನುಭವ ಮಂಟಪದ 3ನೇ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ನಾಟಕ, ಅ.15ರಂದು ರೈತ ಸಮಾವೇಶ, 16ರಂದು ಹಿರಿಯ ನಾಗರಿಕರ ಸಮಾವೇಶ, 17ರಂದು ಜಗತ್ತಿನ ಮೊದಲ ಸ್ತ್ರೀ ತತ್ವಜ್ಞಾನಿ ಮಹಾದೇವಿಯಕ್ಕ ಕುರಿತು ಗೋಷ್ಠಿ, ಅ.18ರಂದು ಬಸವಕಲ್ಯಾಣದ ಪುನರುಜ್ಜೀವನದ ರೂವಾರಿ ಬಾಬಾ ಸಾಹೇಬ ವಾರದ ಕುರಿತು ಗೋಷ್ಠಿ, 19ರಂದು ಮಹಾರಾಷ್ಟದ ಬಸವ ಬೆಳಕು ಅ.20 ರಂದು 11ಗಂಟೆಗೆ ಹುತಾತ್ಮ ಶರಣ ಹರಳಯ್ಯ - ಕಲ್ಯಾಣಮ್ಮನವರ ವೀರಗಾಥೆ, 3 ಗಂಟೆಗೆ ಐತಿಹಾಸಿಕ ಬಸವಕಲ್ಯಾಣದ ಕೋಟೆಯಿಂದ ಶರಣರ ಭಾವಚಿತ್ರಗಳ ಮೆರವಣಿಗೆ ಸಾಯಂಕಾಲ 6 ಗಂಟೆಗೆ ಶರಣ ವಿಜಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ನಡೆಯು ವುದು. ಅ.21ರಂದು ವಚನ ಪಠಣದೊಂದಿಗೆ ಮಂಗಲ ಜರುಗುವುದು. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಮತ್ತು ಸಿದ್ಧರಾಮೇಶ್ವರರ ಪ್ರವಚನ ನಡೆಯುವುದು, ಅ.14ರಂದು ಮುಂಜಾನೆ 11 ಗಂಟೆಗೆ ಯುವ ಸಮಾವೇಶ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಇಸ್ರೋದ ಮಾಜಿ ಸಹ ಸಂಚಾಲಕ ಡಾ. ರಾಮನಗೌಡ ವಿ.ನಾಡಗೌಡ ಹಾಗೂ ಡಿಆರ್‌ಡಿಒ ವಿಜ್ಞಾನಿ ಡಾ.ಕೆ.ತೇಜಸ್ವಿ ಅವರಿಂದ ವ್ಯಾಖ್ಯಾನ ಮತ್ತು ಸಂವಾದ ಜರುಗುವುದು ಎಂದರು.

ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ:

ಅ.20ರಂದು ನಡೆಯವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡ ಮಾಡುವ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರಕ್ಕೆ ಕಲಬುರಗಿ ಶರಣ ಬಸವೇಶ್ವರ ವಿಶ್ವವಿದ್ಯಾಲಯ ಕುಲಾಧಿಪತಿ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾ ಅವರಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಡಾ.ಸೋಮನಾಥ ಯಾಳವಾರ ತಿಳಿಸಿದ್ದಾರೆ.

ಈ ಪ್ರಶಸ್ತಿಯು ನಗದು ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. 2017ರಲ್ಲಿ ಆರಂಭಿಸಲಾದ ಈ ಪ್ರಶಸ್ತಿ ಕಲೆ, ಸಾಹಿತ್ಯ, ಸಂಗೀತ. ಶೈಕ್ಷಣಿಕ ಸೇವೆ, ಸಾಮಾಜಿಕ ಸೇವೆ ಸೇರಿ ವಿವಿಧ ಕ್ಷೇತ್ರದ 10 ಜನ ಸಾಧಕರಿಗೆ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವೀರಣ್ಣಾ ಹಲಶೆಟ್ಟಿ, ಡಾ.ಜಿ.ಎಸ್.ಭುರಾಳೆ, ಬಸವರಾಜ ಬಾಲಿಕಿಲೆ, ಚನ್ನಪ್ಪಾ ಪ್ರತಾಪೂರೆ, ಶಂಕರ ಕರಣೆ, ನಿರ್ಮಲಾ ಶಿವಣಕರ್, ಮಲ್ಲಪ್ಪಾ ಭಾಗ್ಯವಾಡಿ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ ಇತರರು ಉಪಸ್ಥಿತರಿದ್ದರು.

--

ಚಿತ್ರ 6ಬಿಡಿಆರ್65:

ಬಸವಕಲ್ಯಾಣದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.