ಸಾರಾಂಶ
ಹೊಸಕೋಟೆ: ಫಿಲಿಫೈನ್ಸ್ ನಲ್ಲಿ ನಡೆದ 22ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹೊಸಕೋಟೆ ನಗರದ ಕ್ರೀಡಾಪಟು ಸುಶೀಲಾ ಮೂರ್ತಿ ಅವರು ಷಾಟ್‌ಪುಟ್ ಎಸೆತದಲ್ಲಿ ಕಂಚಿನ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಹೊಸಕೋಟೆ: ಫಿಲಿಫೈನ್ಸ್ ನಲ್ಲಿ ನಡೆದ 22ನೇ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಹೊಸಕೋಟೆ ನಗರದ ಕ್ರೀಡಾಪಟು ಸುಶೀಲಾ ಮೂರ್ತಿ ಅವರು ಷಾಟ್‌ಪುಟ್ ಎಸೆತದಲ್ಲಿ ಕಂಚಿನ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಂಚಿನ ಪದಕವನ್ನು ಪಡೆದ ಸುಶೀಲಾಮೂರ್ತಿ ಅವರನ್ನು ಮಾಸ್ಟರ್ಸ್ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಜಂಟಿ ಕಾರ್ಯದರ್ಶಿ ಎಚ್.ಸಿ.ಷಣ್ಮುಗಂ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಸೇರಿದಂತೆ ವಿವಿಧ ಕ್ರೀಡಪಟುಗಳು ಅಭಿನಂದಿಸಿದ್ದಾರೆ.