ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಂಚಿನ ಪದಕ ಗೆದ್ದ ಅಜ್ಮತ್ ಅವರನ್ನು ಸನ್ಮಾನಿಸಲಾಯಿತು
ಕೊಪ್ಪಳ: ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಇತ್ತೀಚಿಗೆ ನಡೆದ ರಾಜ್ಯಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಗಂಗಾವತಿ ನಗರದ ಜಿಜಿಎಫ್ಸಿ ಜಿಮ್ ನ ಮೊಹಮ್ಮದ್ ಅಜ್ಮತ್ ಕಂಚಿನ ಪದಕ ಗೆದ್ದಿದ್ದಾರೆ.
ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸ್ಪರ್ಧೆಯಲ್ಲಿ ಮೊಹಮ್ಮದ್ ಅಜ್ಮತ್ ಭಾಗವಹಿಸಿ ಮೂರನೇ ಸ್ಥಾನದ ಕಂಚಿನ ಪದಕ ಪಡೆಯುವುದರ ಮೂಲಕ ಗಂಗಾವತಿ ನಗರಕ್ಕೆ ಮತ್ತು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಂಚಿನ ಪದಕ ಗೆದ್ದ ಅಜ್ಮತ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಶುಭ ಹಾರೈಸಿ ಮಾತನಾಡಿದ ಮಾಜಿ ಬಾಡಿ ಬಿಲ್ಡರ್‌ಮೈಬೂಬ್, ಇಂದಿನ ದಿನಮಾನದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್ ಎಂಬುದು ಯುವಕರಲ್ಲಿ ಮನೆ ಮಾಡಿದೆ. ಆದರೆ ದೇಹ ಚೆನ್ನಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದರೆ ಬಾಡಿ ಬಿಲ್ಡಿಂಗ್ ಮತ್ತು ಯೋಗದಂತಹ ಕಲೆಗಳ ಕಡೆಗೆ ಗಮನ ಹರಿಸಬೇಕು. ಇಂತಹ ಕ್ರೀಡೆಗಳ ಕಡೆಗೆ ಯುವಕರು ಅತಿ ಹೆಚ್ಚು ಸಾಗಬೇಕು ಎಂದರು.
ಕರಾಟೆ ಮಾಸ್ಟರ್ ಜಬಿವುಲ್ಲಾ, ಸಮ್ರಾನ್ ಸಲ್ಮಾನ್, ಸೈಯದ್ ನದೀಮ್, ಸಮೀರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.