ತಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಹೋದರ ದುಃಖ ತಾಳಲಾರದೇ ಅಂತ್ಯಕ್ರಿಯೆಗೆ ಅರ್ಧ ಗಂಟೆಗೆ ಮುಂಚೆ ಸಾವನ್ನಪ್ಪಿದ್ದು, ಸಹೋದರರು ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬ್ಯಾಡಗಿ: ತಮ್ಮನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಹೋದರ ದುಃಖ ತಾಳಲಾರದೇ ಅಂತ್ಯಕ್ರಿಯೆಗೆ ಅರ್ಧ ಗಂಟೆಗೆ ಮುಂಚೆ ಸಾವನ್ನಪ್ಪಿದ್ದು, ಸಹೋದರರು ಸಾವಿನಲ್ಲೂ ಒಂದಾದ ಘಟನೆ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಹನುಮಂತಪ್ಪ ವೆಂಕಪ್ಪ ವೆಂಕಣ್ಣನವರ (55) ಫೆ.19ರಂದು ಮಧ್ಯಾಹ್ನ 12ರ ಸುಮಾರಿಗೆ ಸಾವ ನ್ನಪ್ಪಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸವಣೂರಿನಿಂದ ಆಗಮಿಸಿದ್ದ ಹಿರಿಯ ಸಹೋದರ ಭೀಮಪ್ಪ ವೆಂಕಪ್ಪ ವೆಂಕಣ್ಣನವರ (65) ಕೂಡ ಅಂತ್ಯಕ್ರಿಯೆಗಿಂತ ಸ್ವಲ್ಪ ಮೊದಲು ಸಾವನ್ನಪ್ಪಿದರು.ಘಟನೆ ಹಿನ್ನೆಲೆ: ಗುರುವಾರ ಸಹೋದರ ಹನುಮಂತಪ್ಪ ನಿಧನರಾದ ಹಿನ್ನೆಲೆಯಲ್ಲಿ ಅಂತ್ಯಕ್ತಿಯೆ ನಡೆಸಲು ಸಂಜೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು, ಅಂತ್ಯಕ್ರಿಯೆಗೆ ಇನ್ನೇನು ಅರ್ಧ ಗಂಟೆಗೆ ಮುಂಚಿತವಾಗಿ ಹಿರಿಯ ಸಹೋದರ ಭೀಮಪ್ಪ ಸಹೋದರ ನೆಲಕ್ಕೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೊದಲಿನಿಂದಲೂ ತೀವ್ರ ಅನ್ಯೋನ್ಯವಾಗಿದ್ದ ಸಹೋದರರು ಇತ್ತೀಚೆಗೆ ಬೇರೆಬೇರೆ ಮನೆಗಳಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.ಶುಕ್ರವಾರ ಭೀಮಪ್ಪನ ಅಂತ್ಯಕ್ರಿಯೆ: ಇಬ್ಬರ ಸಾವಿನ ಬಳಿಕ ಗ್ರಾಮದ ಹಿರಿಯರು ಸೇರಿಕೊಂಡು ಮೊದಲು ಸಾವನ್ನಪ್ಪಿದ್ದ ಹನುಮಂತಪ್ಪನ ಅಂತ್ಯಕ್ರಿಯೆ ಗುರುವಾರವೇ ಪೂರ್ತಿಗೊಳಿಸಿದರು, ಬಳಿಕ ಫೆ.20 (ಶುಕ್ರವಾರ) ಮಧ್ಯಾಹ್ನ ಹಿರಿಯ ಸಹೋದರ ಭೀಮಪ್ಪ ವೆಂಕಣ್ಣನವರ ಅಂತ್ಯಕ್ರಿಯೆ ನೆರವೇರಿತು.