ಮೈಸೂರಿಗೆ ಯೋಗದಲ್ಲಿ ವಿಶ್ವ ಮಾನ್ಯತೆಯನ್ನು ತಂದವರು ಪಟ್ಟಾಭಿ ಜೋಯಿಸ್

| Published : Jul 29 2024, 12:56 AM IST

ಮೈಸೂರಿಗೆ ಯೋಗದಲ್ಲಿ ವಿಶ್ವ ಮಾನ್ಯತೆಯನ್ನು ತಂದವರು ಪಟ್ಟಾಭಿ ಜೋಯಿಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೌಶಿಕ ಗ್ರಾಮದಿಂದ ಬಂದ ಪಟ್ಟಾಭಿ ಜೋಯಿಸ್ ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತದೊಂದಿಗೆ ಕೃಷ್ಣಮಾಚಾರ್ಯರ ಬಳಿ ಯೋಗವನ್ನು ಅಭ್ಯಸಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಕಡು ಬಡತನದಿಂದ ಬಂದ ಪಟ್ಟಾಭಿ ಜೋಯಿಸ್ ಅವರು ತಮ್ಮ ಸಂಕಲ್ಪ ಶಕ್ತಿಯಿಂದ ಯೋಗವನ್ನು ವಿಶ್ವ ಮಾನ್ಯವನ್ನಾಗಿ ಮಾಡಿದರು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಬಿ.ಆರ್. ನಟರಾಜ್ ಜೋಯಿಸ್ ತಿಳಿಸಿದರು.

ನಗರದ ಗೋಕುಲಂನಲ್ಲಿರುವ ಯೋಗ ವಿತ್ ಶ್ರೀನಾಥ ಕೇಂದ್ರದಲ್ಲಿ ಆಯೋಜಿಸಿದ್ದ ಪಟ್ಟಾಭಿ ಜೋಯಿಸ್ ಜನ್ಮದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೌಶಿಕ ಗ್ರಾಮದಿಂದ ಬಂದ ಪಟ್ಟಾಭಿ ಜೋಯಿಸ್ ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತದೊಂದಿಗೆ ಕೃಷ್ಣಮಾಚಾರ್ಯರ ಬಳಿ ಯೋಗವನ್ನು ಅಭ್ಯಸಿಸಿದರು. ಕೃಷ್ಣಮಾಚಾರ್ಯರು ಮೈಸೂರು ಬಿಟ್ಟು ಚೆನ್ನೈಗೆ ತೆರಳಿದ ನಂತರ ಪಟ್ಟಾಭಿ ಜೋಯಿಸ್ ಅವರು ಮೈಸೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು ಎಂದರು.

ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜ್ ಮಾತನಾಡಿ, ಮೈಸೂರಿನ ಗೋಕುಲಂ ಯೋಗದ ಕೇಂದ್ರವಾಗಿ ಬೆಳೆಯಲು ಪಟ್ಟಾಭಿ ಜೋಯಿಸರೇ ನೇರ ಕಾರಣ ಎಂದರು.

ಸಮಾಜ ಸೇವಕ ಕೆ. ರಘುರಾಂ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಬಿ.ಪಿ. ಮೂರ್ತಿ, ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀನಾಥ್, ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಅನಂತ, ಹರ್ಷವರ್ಧನ್ ಇದ್ದರು.