ಬ್ರಿಸೆಲ್ ಪತ್ರೋಸ್ ಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ

| Published : May 18 2025, 11:53 PM IST

ಬ್ರಿಸೆಲ್ ಪತ್ರೋಸ್ ಗೆ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ಬಡಗಬೈಲು ಗ್ರಾಮದ ಕಣಿಗೇರಿಯ ಬ್ರಿಸೆಲ್ ಪತ್ರೋಸ್ ಅವರು ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪಡೆದಿದ್ದಾರೆ.

ನರಸಿಂಹರಾಜಪುರ: ಬಡಗಬೈಲು ಗ್ರಾಮದ ಕಣಿಗೇರಿಯ ಬ್ರಿಸೆಲ್ ಪತ್ರೋಸ್ ಅವರು ಬೆಂಗಳೂರಿನಲ್ಲಿ ನಡೆದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪಡೆದಿದ್ದಾರೆ.

ಬ್ರೆಸೆಲ್ ಪತ್ರೋಸ್ ಬೆಂಗಳೂರಿನಲ್ಲಿ ಮೇ 15 ರಂದು ಬಾಡಿ ಬಿಲ್ಡಿಂಗ್ ಫೆಡರೇಷನ್ ಸಾಯಿ ಕ್ಲಾಸಿಕ್-2025 ಏರ್ಪಡಿಸಿದ್ದ ಮಿಸ್ಟರ್ ಸೌತ್ ಇಂಡಿಯಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಸೀನಿಯರ್ ವಿಭಾಗದಲ್ಲಿ 5 ನೇ ಸ್ಥಾನ ಪಡೆದು ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಪಡೆದುಕೊಂಡಿದ್ದಾರೆ. ಬ್ರಿಸೆಲ್ ಪತ್ರೋಸ್ ಅವರು ನರಸಿಂಹರಾಜಪುರ ತಾಲೂಕಿನ ಬಡಗಬೈಲು ಗ್ರಾಮದ ಕಣಿಗೇರಿಯ ಮೊಳೆಯಲ್ ಕುಟುಂಬದ ಎಂ.ಎ.ಪತ್ರೋಸ್ ಮತ್ತು ಶಾಲಿ ಅವರ ಪುತ್ರರಾಗಿದ್ದಾರೆ. ಬ್ರೆಸೆಲ್ ಪತ್ರೋಸ್ 5 ನೇ ಸ್ಥಾನ ಪಡೆದಿರುವುದಕ್ಕೆ ತಾಲೂಕು ಯಂಗ್ ಮನ್ ಕ್ರಿಶ್ಚಿಯನ್ ಅಸೋಷಿಯೇಷನ್ ನ ಅಧ್ಯಕ್ಷ ಎಂ.ಪಿ.ಸನ್ನಿ ಅಭಿನಂದನೆ ಸಲ್ಲಿಸಿ ಮಲೆನಾಡಿನ ಯುವ ಪ್ರತಿಭೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಿದರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದಿದ್ದಾರೆ.