ಬಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆ ಇಳುವರಿ ತೋರಿಸುವಲ್ಲಿ ಕಲ್ಲೂರ ವಿಫಲ

| Published : Dec 16 2023, 02:00 AM IST

ಬಿಎಸ್ಎಸ್‌ಕೆ ಸಕ್ಕರೆ ಕಾರ್ಖಾನೆ ಇಳುವರಿ ತೋರಿಸುವಲ್ಲಿ ಕಲ್ಲೂರ ವಿಫಲ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಸುಭಾಷ ಕಲ್ಲೂರಗೆ ಬರೆದ ಮನವಿ ಜಿಲ್ಲಾಧಿಕಾರಿಗೆ ಸಲ್ಲಿಸಿ, ಕಾರ್ಖಾನೆ ಅಧ್ಯಕ್ಷ, ಆಡಳಿತ ಮಂಡಳಿ ರಾಜಿನಾಮೆ ನೀಡುವಂತೆ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್‌ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಇಳುವರಿ ತೋರಿಸುವುದರಲ್ಲಿ ಕಾರ್ಖಾನೆಯ ಅಧ್ಯಕ್ಷ ಸುಭಾಷ ಕಲ್ಲೂರ ವಿಫಲರಾಗಿದ್ದು, ಕೂಡಲೆ ತಮ್ಮ ಆಡಳಿತ ಮಂಡಳಿಯೊಂದಿಗೆ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿ ಶುಕ್ರವಾರ ರೈತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಸುಭಾಷ ಕಲ್ಲೂರಗೆ ಬರೆದ ಮನವಿ ಜಿಲ್ಲಾಧಿಕಾರಿಗೆ ಸಲ್ಲಿಸಿ, ಕಳೆದ 2-3 ವರ್ಷಗಳಿಂದ ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೀರಿ. ತಾವು ಅಧ್ಯಕ್ಷರಾಗಿದ್ದಾಗ ಕಾರ್ಖಾನೆಯು ದುರುಸ್ತಿ ಇರುವುದರಿಂದ ಚಲಾವಣೆಯಲ್ಲಿ ಇರಲಿಲ್ಲ.

ತಾವು ಅಧ್ಯಕ್ಷರಾದ ನಂತರ ಕಾರ್ಖಾನೆಗೆ ದುರುಸ್ತಿ ಮಾಡಿ, ರೈತರ ಕಬ್ಬು ಕಟಾವು ಮಾಡಿ, ಕಾರ್ಖಾನೆ ಪ್ರಾರಂಭಿಸಿದ್ದರಿಂದ ರೈತರು ಖುಷಿ ಪಟ್ಟಿದ್ದರು. ಆದರೆ ಇಳುವರಿ ತೋರಿಸುವುದರಲ್ಲಿ ವಿಫಲವಾಗಿದ್ದೀರಿ. ಕೇವಲ ಶೇ.5ರಷ್ಟು ಇಳುವರಿ ವಿಶ್ವದಲ್ಲಿ ಯಾವ ಕಾರ್ಖಾನೆಯೂ ಇದುವರೆಗೆ ತೋರಿಸಿಲ್ಲ.

ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿರುವ ರೈತರ ಬಿಲ್ಲು ಕೊಟ್ಟಿಲ್ಲ. ಕಾರ್ಖಾನೆ ಆವರಣದಲ್ಲಿನ ಸಾವಿರಾರು ಸಾಗವಾನಿ ಗಿಡಗಳು ಮಾರಾಟ ಮಾಡಿದ್ದೀರಿ. ಕಬ್ಬು ಸರಬರಾಜು ಮಾಡುವ ಎತ್ತಿನ ಬಂಡಿಗಳು ಕೂಡ ಮಾರಾಟ ಮಾಡಿದ್ದೀರಿ. ಮತ್ತು ಕಾರ್ಖಾನೆಯಲ್ಲಿನ ಹಳೆಯ ಸಾಮಾನುಗಳು ಮಾರಿದ್ದೀರಿ. ಆದರೂ ಕೂಡ ರೈತರ ಬಿಲ್‌ | ಕೊಡಲು ನಿಮಗೆ ಸಾಧ್ಯವಾಗಿಲ್ಲ.

ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬೀದರ್‌ನಿಂದ ಬೆಂಗಳೂರಿಗೆ 4-5 ಬಾರಿ ಹೋಗಿ, ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, 11 ಕೋಟಿ ರು. ರೈತರ ಬಿಲ್‌ ಕೊಡಲು ಕೇಳಿದ್ದೇವು. ಆದರೆ, ಕಾರ್ಖಾನೆಗೆ ತಾವು ಅಧ್ಯಕ್ಷರಾಗಿ ಏನು ಕೆಲಸವಾಗಿಲ್ಲ. ಎಲ್ಲಾ ರೀತಿಯಿಂದ ಕಾರ್ಖಾನೆಗೆ ಹಾನಿಯಾಗಿದೆ. ಆದ ಕಾರಣ ಮುಂಬರುವ 15 ದಿನಗಳಲ್ಲಿ ಅಧ್ಯಕ್ಷ ಸ್ಥಾನದಿಂದ ಹಾಗೂ ತಮ್ಮ ಆಡಳಿತ ಮಂಡಳಿಯು ರಾಜಿನಾಮೆ ನೀಡಿ ರೈತರ ಹಿತ ಕಾಪಾಡಬೇಕು.

ತಾವು ರಾಜಿನಾಮೆ ಕೊಟ್ಟರೆ ಕಾರ್ಖಾನೆಯು ಸರ್ಕಾರ ತಮ್ಮ ಅಧೀನದಲ್ಲಿ ತೆಗೆದುಕೊಂಡು, ಪ್ರಾರಂಭ ಮಾಡಬಹುದು. ಇದು ರೈತರ ಹಿತದೃಷ್ಟಿಯಿಂದ ಒಳ್ಳೆಯದಾಗುತ್ತದೆ. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಪತ್ರದಲ್ಲಿ ಸಂಘ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶ್ರೀಮಂತ ಬಿರಾದಾರ, ಶೇಷರಾವ ಕಣಜಿ, ಶಂಕರೆಪ್ಪಾ ಪಾರಾ, ಚಂದ್ರಶೇಖರ ಜಮಖಂಡಿ, ಪ್ರವೀಣ ಕುಲಕರ್ಣಿ, ಪ್ರಕಾಶ ಬಾವಗೆ, ಸುಭಾಷ ರಗಟೆ, ನಾಗಯ್ಯಾ ಸ್ವಾಮಿ, ಸತೀಶ ನನ್ನೂರೆ, ಶಂಕರೆಪ್ಪಾ ಪಾಟೀಲ ಅತಿವಾಳ,, ಪ್ರಭುರಾವ ಪಾಟೀಲ ಹೊನ್ನಡ್ಡಿ, ರಾಮರಾವ ಶೇಡೋಳ ಮತ್ತಿತರರು ಇದ್ದರು.