ಸಾರಾಂಶ
ಸಹಾನುಭೂತಿ, ದಯೆ ಮತ್ತು ಪ್ರೀತಿಯ ಮೇಲೆಯೇ ಜಗತ್ತು ನಿಂತಿದೆ ಎನ್ನುವ ಗೌತಮ ಬುದ್ದರ ಸಂದೇಶ ಸರ್ವಕಾಲಿಕ ಹಾಗೂ ಸದಾ ಅನುಕರಣೇಯ ಎಂದು ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ದಾವಣಗೆರೆಯಲ್ಲಿ ಹೇಳಿದ್ದಾರೆ.
- ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ವಕೀಲ ಎಲ್.ಎಚ್. ಅರುಣಕುಮಾರ್- - -
ಕನ್ನಡಪ್ರಭ ವಾರ್ತೆ, ದಾವಣಗೆರೆ ಸಹಾನುಭೂತಿ, ದಯೆ ಮತ್ತು ಪ್ರೀತಿಯ ಮೇಲೆಯೇ ಜಗತ್ತು ನಿಂತಿದೆ ಎನ್ನುವ ಗೌತಮ ಬುದ್ದರ ಸಂದೇಶ ಸರ್ವಕಾಲಿಕ ಹಾಗೂ ಸದಾ ಅನುಕರಣೇಯ ಎಂದು ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್ ಹೇಳಿದರು.ನಗರದ ಕೆ.ಬಿ. ಬಡಾವಣೆಯ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಕಾರ್ಯಾಲಯದಲ್ಲಿ ನಡೆದ ಬುದ್ಧ ಪೂರ್ಣಿಮಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಹಿಂಸೆ, ಜೀವನದ ಗೌರವ ಮತ್ತು ಮಹಿಳೆಯರಿಗೆ ಸಮಾತೆಯ ಬೋಧನೆಗಳಿಂದಾಗಿ ಬೌದ್ದ ಧರ್ಮವು ಜನಪ್ರಿಯತೆ ಗಳಿಸಿತು. ಭಾರತವನ್ನು ಜಗತ್ತಿನ ಇತರೆ ದೇಶಗಳು ಇಂದಿಗೂ ಬುದ್ದನ ನಾಡು ಎಂದೇ ಗುರುತ್ತಿಸುತ್ತದೆ. ಬುದ್ದ ಕೇವಲ ನೆನಪಲ್ಲ, ಅದು ಸಮಾಜದ ಶಕ್ತಿಯ ಸೂಚಕ ಎಂದರು.ಕ್ರೌರ್ಯ, ಮೌಢ್ಯ, ಅಸಮಾನತೆ, ಕಂದಾಚಾರಗಳಂತಹ ಸ್ಥಾಪಿತ ಆಚರಣೆಗಳಿಂದ ನರಳುತ್ತಿದ್ದ ಜಗತ್ತಿಗೆ ಜ್ಞಾನದ ಬೆಳಕಾಗಿ ಶಾಂತಿ, ಸಮಾನತೆಯ ಹಾದಿ ತೋರಿದವರು ಗೌತಮ ಬುದ್ದ. ಸಮಾಜ ದೇವರು, ಧರ್ಮ ಬಗ್ಗೆ ಮಾತನಾಡುತ್ತಿದ್ದಾಗ ಗೌತಮ ಬುದ್ದರು ಮನುಷ್ಯನ ಬಗ್ಗೆ ಮಾತನಾಡಿ, ಮಾನವ ಬದುಕಿಗೆ ಘನತೆ ತಂದುಕೊಟ್ಟವರು ಎಂದರು.
ನಿವೃತ್ತ ಉಪನ್ಯಾಸಕಿ ಎಸ್.ಎಂ.ಮಲ್ಲಮ್ಮ ಮಾತನಾಡಿ, ಬುದ್ದ ಹಾಗೂ ಬಸವರ ಚಿಂತನೆಗಳು ಹಿಂದಿನ ಸಮಾಜಕ್ಕೆ ಪ್ರಸ್ತುತವಾಗಿವೆ. ಅಹಿಂಸೆ ಮತ್ತು ಕರುಣೆಯ ಸಮಾಜವನ್ನು ಗೌತಮ ಬುದ್ದರು ಬಯಸಿದ್ದರು ಎಂದು ತಿಳಿಸಿದರು.ಕವಿಯತ್ರಿ ಸತ್ಯಭಾಮ ಮಂಜುನಾಥ ಮಾತನಾಡಿ, ಬುದ್ದ ಮಾನವೀಯ ಮೌಲ್ಯಗಳನ್ನು ಪಸರಿಸಿದ ಮನುಕುಲದ ಮಹಾಬೆಳಕು ಎಂದು ವರ್ಣಿಸಿದರು.
ಈ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಗೌರವಾಧ್ಯಕ್ಷ ಪರಮೇಶ್ವರಪ್ಪ ಸಿರಿಗೆರೆ, ಕುಮಾರ ಅನೆಕೊಂಡ, ಸಾಹಿತಿ ಎಸ್.ಸಿದ್ದೇಶ್ ಕುರ್ಕಿ, ವಕೀಲರಾದ ಆರ್.ಯೋಗೀಶ್ವರಪ್ಪ. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು, ರಂಗಭೂಮಿ ಕಲಾವಿದರಾದ ಶಿವಾಜಿ ರಾವ್, ಮಾರ್ತಾಂಡಪ್ಪ ಇದ್ದರು.- - - -23ಕೆಡಿವಿಜಿ32ಃ:
ದಾವಣಗೆರೆಯಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಿಂದ ಬುದ್ದ ಪೂರ್ಣಿಮೆ ಆಚರಿಸಲಾಯಿತು.;Resize=(128,128))
;Resize=(128,128))