ಬುದ್ದ ಪ್ರಥಮ ಆಧ್ಯಾತ್ಮಿಕ ಮನೋ ಚಿಕಿತ್ಸಕ

| Published : May 24 2024, 12:53 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರಭಗವಾನ ಬುದ್ಧರು ಪ್ರಥಮ ಆಧ್ಯಾತ್ಮಿಕ ಮನೋ ಚಿಕಿತ್ಸಕರು. ಬುದ್ಧನ ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಅತ್ಯಂತ ವೈಜ್ಞಾನಿಕವಾದದ್ದು ಎಂದು ಬನಹಟ್ಟಿ ವಿಶ್ರಾಂತ ಪ್ರಾಚಾರ್ಯ ಎಸ್.ಎಂ.ಶೇಖ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರಭಗವಾನ ಬುದ್ಧರು ಪ್ರಥಮ ಆಧ್ಯಾತ್ಮಿಕ ಮನೋ ಚಿಕಿತ್ಸಕರು. ಬುದ್ಧನ ಚಿಂತನೆಗಳು ಹಿಂದೆಂದಿಗಿಂತಲೂ ಇಂದು ಅತ್ಯಂತ ವೈಜ್ಞಾನಿಕವಾದದ್ದು ಎಂದು ಬನಹಟ್ಟಿ ವಿಶ್ರಾಂತ ಪ್ರಾಚಾರ್ಯ ಎಸ್.ಎಂ.ಶೇಖ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ, ತಾಲೂಕು ಹಾಗೂ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮವಿರುವುದು ಮನುಷ್ಯನ ಏಳಿಗೆಗಾಗಿ. ಧರ್ಮಕ್ಕಿಂತ ದೇಶ ದೊಡ್ಡದು. ಅಷ್ಟಾಂಗ ಮಾರ್ಗ ಸಮ್ಮೇಖ ದೃಷ್ಟಿ, ವಿಚಾರ, ಮಾತು, ಜೀವನ, ಪ್ರಯತ್ನ, ಏಕಾಗ್ರತೆ, ಕಾರ್ಯ, ಜಾಗೃತಿ ಅಳವಡಿಸಬೇಕು. ಬುದ್ಧ ಪೂರ್ಣಿಮಾ ಮಹತ್ವ ಎಂದರೆ ಜನ್ಮ, ಜ್ಞಾನೋದಯ, ಮಹಾಪರಿ ನಿರ್ವಾಣ, ವೈಶಾಖ ಪೂರ್ಣಿಮೆ, ಶಾಂತಿ ಅಹಿಂಸೆ ತತ್ವದಿಂದ ಬುದ್ಧರು ವಿಶ್ವ ತತ್ವಜ್ಞಾನಿಗಳಾದರು ಎಂದು ಬಣ್ಣಿಸಿದರು.

ಇತಿಹಾಸ ಉಪನ್ಯಾಸಕ ಡಾ.ಆನಂದ ಕುಲಕರ್ಣಿ ಉಪನ್ಯಾಸ ನೀಡಿ, ಕ್ರಿ.ಶ 6ನೇ ಶತಮಾನದಲ್ಲಿ ಲುಂಬಿನಿಯಲ್ಲಿ ಜನಿಸಿದರು. ಬುದ್ಧ ಆಗಿನ ಕಾಲದಲ್ಲಿ ಪಾಲಿ ಭಾಷೆಯಲ್ಲಿ ತಮ್ಮ ವಿಚಾರಗಳನ್ನು ತಿಳಿಸುತ್ತಾ ಆಶೆಯೇ ದುಖಃಕ್ಕೆ ಕಾರಣ. ಅಹಿಂಸೆ ಪರಮೋ ಧರ್ಮ ಎಂದು ವಿಚಾರ ಅತ್ಯಂತ ಸೂಕ್ತ. ಬುದ್ಧನ ತತ್ವಗಳು ಸಾರ್ವಕಾಲಿಕ ಸತ್ಯ ಎಂದರು.

ವಿಜಯಪುರ ನಗರ ಘಟಕದ ಕಸಾಪ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳೆನವರ ಮಾತನಾಡಿ, ಬುದ್ಧ ಭೂಮಿಯ ಮೇಲಿನ ಮೊದಲ ವೈಜ್ಞಾನಿಕ ತತ್ವಜ್ಞಾನಿ. ಬುದ್ಧ ಬೋಧಿಸಿದ ಪಂಚಶೀಲಗಳು, ನಾಲ್ಕು ಅರಿವ ಸತ್ಯಗಳನ್ನು ಅರಿತು ಬದುಕಬೇಕು. ಸಮಾಜಿಕ ಕಂದಾಚಾರಗಳನ್ಮು ಪ್ರತಿರೋಧಿಸದೇ ಪರಿವರ್ತನೆ ಮಾಡಿದ ಮಹಾಪುರುಷ ಭಗವಾನ ಬುದ್ಧರು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಡಿವೆಪ್ಪ ಸಾಲಗಲ್, ಅತಿಥಿಗಳಾದ ಮಹೇಶ ಕ್ಯಾತನ್. ಎಸ್.ಎಲ್.ಇಂಗಳೇಶ್ವರ ಬುದ್ಧನ ಕುರಿತು ಮಾತನಾಡಿದರು. ಲಕ್ಷ್ಮೀ ಕಾತ್ರಾಳ, ಆನಂದ ಹೊನವಾಡ, ಮಹೆತಾಬ ಕಾಗವಾಡ ಬುದ್ಧರ ಕುರಿತು ಕವನ ವಾಚಿಸಿದರು. ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ ವಂದಿಸಿದರು, ಪರುಶರಾಮ ಪೋಳ ವೇದಿಕೆಯಲ್ಲಿದ್ದರು. ಇಂಡಿ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘ ಗೌರವ ಕಾರ್ಯದರ್ಶಿ ಅನಿತಾ ರಾಠೋಡರನ್ನು ಸನ್ಮಾನಿಸಲಾಯಿತು.

ರವಿ ಕಿತ್ತೂರ, ಸುಭಾಷ ಗುಡಿಮನಿ, ರಾಜೇಸಾಬ ಶಿವನಗುತ್ತಿ, ಸೌಜನ್ಯ ಲಂಬು, ಬಸನಗೌಡ ಬಿರಾದಾರ, ಬಸವರಾಜ ಅಜೂರ, ಟಿ.ಆರ್.ಹಾವಿನಾಳ, ಅಹಮ್ಮದ ವಾಲಿಕಾರ, ಕಾಶಿನಾಥ ಹೊಸುರ. ಕೆ.ಎಸ್.ಹನಮಾನಿ, ಶಾಂತಾ ವಿಬೂತಿ, ಜಿ.ಎಸ್.ಬಳ್ಳೂರ, ಎಂ.ಡಿ.ಕಂಟಿಕರ, ಗಂಗಮ್ಮ ರಡ್ಡಿ, ಉಮೇಶ ಕಾಂಬಳೆ, ಎಂ.ಎಚ್.ಬೀಳಗಿ, ನಿಂಗರಾಜ ಬಿರಾದಾರ, ಶಶಿಕಲಾ ನಾಯ್ಕೋಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.