ದುರ್ದುಂಡೇಶ್ವರ ಮಠದಲ್ಲಿ ಬುದ್ಧಪೂರ್ಣಿಮೆ ಪೂಜೆ

| Published : May 24 2024, 12:53 AM IST

ದುರ್ದುಂಡೇಶ್ವರ ಮಠದಲ್ಲಿ ಬುದ್ಧಪೂರ್ಣಿಮೆ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬುದ್ಧಪೂರ್ಣಿಮೆ ಅಂಗವಾಗಿ ತಾಲೂಕಿನ ಬೇಬಿಗ್ರಾಮದ ದುರ್ದುಂಡೇಶ್ವರ ಮಠದಲ್ಲಿ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆದವು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬುದ್ದಪೂರ್ಣಿಮೆ ಅಂಗವಾಗಿ ತಾಲೂಕಿನ ಬೇಬಿಗ್ರಾಮದ ದುರ್ದುಂಡೇಶ್ವರ ಮಠದಲ್ಲಿ ವಿಶೇಷ ಪೂಜಾ ಕಾರ್‍ಯಕ್ರಮಗಳು ನಡೆದವು.

ಮಠದ ಆವರಣದಲ್ಲಿರುವ ಶ್ರೀಮರೀದೇವರು ಸ್ವಾಮೀಜಿಗಳ ಗದ್ದುಗೆಯಲ್ಲಿ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರಮಹಂತ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ಭಕ್ತರು ಶ್ರೀಮರೀದೇವರುಸ್ವಾಮೀಜಿಗಳ ಗುದ್ದುಗೆ ನಮಿಸುವ ಮೂಲಕ ಭಕ್ತಿ ಭಾವ ಪ್ರದರ್ಶಿಸಿದರು.ಬಳಿಕ ಡಾ.ಶ್ರೀತ್ರಿನೇತ್ರಮಹಂತಸ್ವಾಮೀಜಿ ಮಾತನಾಡಿ, ಸುಜ್ಞಾನದ ಅರಿವಿನ ಕೊರತೆಯಿಂದಾಗಿ ದೇಶದಲ್ಲಿ ಕ್ರೋದ, ಮತೀಯ ಗಲಭೆಗಳು ಹೆಚ್ಚು ನಡೆಯುತ್ತಿವೆ. ಇವುಗಳನ್ನು ಹೋಗಲಾಡಿಸಬೇಕಾದರೆ ನೀತಿಯ ಶಿಕ್ಷಣದ ಅಗತ್ಯವಿದೆ ಎಂದು ತಿಳಿಸಿದರು.ದೇಹವನ್ನು ಪ್ರೀತಿಸುವುದಕ್ಕಿಂತ ದೇಶವನ್ನು ಪ್ರೀತಿಸುವ ಶಿಕ್ಷಣ ನಮಗೆ ಬೇಕಾಗಿದೆ. ಪೋಷಕರ ನಿರ್ಲಕ್ಷ್ಯ, ನಮ್ಮ ಸುತ್ತಮುಲ್ಲಿನ ಪರಿಸರ, ಕಲುಷಿತ ರಾಜಕೀಯದಿಂದ ಮಕ್ಕಳು ಕ್ರೋಧಗಳಿಗೆ ಒಳಗಾಗಿ ಕೊಲೆ, ಸುಲಿಗೆ, ಅತ್ಯಾಚಾರಗಳಂತ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಪೋಷಕರು ಮಕ್ಕಳಿಗೆ ಸರಿಯಾದ ಸಂಸ್ಕೃತಿ, ಸಂಸ್ಕಾರಗಳನ್ನು ಬೆಳೆಸಬೇಕು. ಮಠ-ಮಂದಿರಗಳಿಗೆ ಕೇವಲ ದೊಡ್ಡವರು ಮಾತ್ರ ಬರುತ್ತಾರೆ. ಜೊತೆಯಲ್ಲಿ ಮಕ್ಕಳನ್ನು ಸಹ ಕರೆತಂದು ಮಕ್ಕಳಿಗೆ ಸಂಸ್ಕಾರದ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.ಮರೀದೇವರುಸ್ವಾಮೀಜಿ ಸುಮಾರು 113 ವರ್ಷಗಳ ಕಾಲ ಬದುಕಿದ್ದ ಶತಾಯುಷಿಗಳು. ಬದುಕಿನ ಉದ್ದಕ್ಕೂ ಭಕ್ತರ ಹೃದಯಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಬಿತ್ತುವ ಕೆಲಸ ಮಾಡುವ ಜತೆಗೆ ಭಕ್ತರಿಗೆ ಧಾರ್ಮಿಕ ಅರಿವು ಮೂಡಿಸಿದ ಮಹಾ ತಪಸ್ವಿಗಳು ಎಂದರು.

ಮರೀದೇವರುಶ್ರೀಗಳು ಬೇಬಿಬೆಟ್ಟದಲ್ಲಿ ಪಾಳುಬಿದ್ದಿದ್ದ ಮಂಟಪವನ್ನು ಮಠವಾಗಿ ರೂಪಿಸಿದರು. ಬೇಬಿಗ್ರಾಮದಲ್ಲಿ ತುಪ್ಪೆಗುಂಡಿಯನ್ನು ಮಠವನ್ನಾಗಿ ನಿರ್ಮಿಸಿ ಧರ್ಮದ ಜಾಗೃತಿ ಮೂಡಿಸಿದರು. ಹಾಗಾಗಿ ಮರೀದೇವರುಸ್ವಾಮೀಜಿ ಸದಾ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.ನಮ್ಮ ಜೀವನದಲ್ಲಿ ಮಹಾತಪಸ್ವಿಗಳನ್ನು ನೋಡುವ ಭಾಗ್ಯ ದೊರೆತಿದ್ದೆ ನನ್ನ ಪುಣ್ಯ ಒಬ್ಬರು ಡಾ.ಶಿವಕುಮಾರ ಸ್ವಾಮೀಜಿಗಳು, ಇನ್ನೊಬ್ಬರು ಶ್ರೀಮರೀದೇವರುಸ್ವಾಮೀಜಿಗಳು. ಇಬ್ಬರು ಮಹಾಚೇತನಗಳು ಭಕ್ತರನ್ನು ಜ್ಞಾನದಿಂದ ಸುಜ್ಞಾನದ ಕಡೆಗೆ ಕರೆತರುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್ ತಪಸ್ವಿಗಳ ಕಾಲಗಟ್ಟದಲ್ಲಿ ಜನಿಸುದ್ದೆ ನಮ್ಮೆಲ್ಲರ ಪುಣ್ಯ ಎಂದು ಬಣ್ಣಿಸಿದರು. ಈ ವೇಳೆ ಭಕ್ತರಾದ ಧರವಾಡ ದ್ಯಾಮಣ್ಣರೇವಣ್ಣನವರ್, ಮಲ್ಲನಗೌಡ ಪಾಟೀಲ್, ನಾಗಣ್ಣಹೊಂಗಲ, ವೀರಭದ್ರ, ಎಂ.ಗಂಗಾಧರ್, ಮಠದ ಕಾರ್‍ಯದರ್ಶಿ ಟಿ.ಪಿ.ಶಿವಕುಮಾರ್, ಮುಖ್ಯಶಿಕ್ಷಕ ಜಗದೀಶ್ ಹಾಜರಿದ್ದರು.