ಸಾರಾಂಶ
ಕನಕಗಿರಿ: ಪಟ್ಟಣದ ಗಂಗಾವತಿ ರಸ್ತೆಯಲ್ಲಿನ ಗೌತಮ ಬುದ್ಧ ವೃತ್ತದಲ್ಲಿ ಬೌದ್ಧ ದಮ್ಮ ಧ್ವಜ ದಿನವನ್ನು ಸೋಮವಾರ ಆಚರಿಸಲಾಯಿತು.ಯುವ ಮುಖಂಡ ನೀಲಕಂಠ ಬಡಿಗೇರ ಮಾತನಾಡಿ, ೧೯ನೇ ಶತಮಾನದಿಂದಲೂ ಉತ್ತರಾರ್ಧದಿಂದ ಧ್ವಜ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವಕ್ಕೆ ಬೌದ್ಧ ದಮ್ಮ ಶಾಂತಿ ಸಂದೇಶ ಸಾರಿದೆ. ಬುದ್ಧನ ಪಂಚಶೀಲ ತತ್ವದಡಿ ಧ್ವಜದ ಆರು ಬಣ್ಣಗಳು ಆತನ ದೇಹದಿಂದ ಹೊರ ಹೊಮ್ಮಿದ ಸೆಳವಿನ ಬಣ್ಣಗಳಾಗಿವೆ. ನೀಲಿ ಬಣ್ಣವು ಶಾಂತಿ ಪ್ರೇಮದ ಸಂಕೇತವಾದರೆ, ಹಳದಿ ಮಧ್ಯಮ ಮಾರ್ಗದ ಕುರಿತು, ಕೆಂಪು ಸಾಧನೆ, ಬುದ್ಧಿವಂತಿಕೆ, ಬಿಳಿ ಬಣ್ಣವು ಶುದ್ಧತೆ ಬಗ್ಗೆ ತಿಳಿಸಿದರೆ, ಕಿತ್ತಳೆಯು ಬುದ್ಧನ ಬೋಧನೆಯ ಬುದ್ಧಿವಂತಿಕೆಯ ಸಂಕೇತ ಸಾರುತ್ತದೆ. ಧ್ವಜ ದಿನಾಚರಣೆಯನ್ನು ವೈಶಾಖ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತಿದ್ದು, ಇದನ್ನು ಬೌದ್ಧ ದಮ್ಮದ ಧ್ವಜ ದಿನಾಚರಣೆ ಎಂದು ಕರೆಯಲ್ಪಡುತ್ತಾರೆ ಎಂದರು.ಬಿಜೆಪಿ ಎಸ್‌ಸಿ ಮೋರ್ಚಾಧ್ಯಕ್ಷ ಜಿಲ್ಲಾಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖರಾದ ಕನಕಪ್ಪ ಮ್ಯಾಗಡೆ, ಮೌನೇಶ ಜಾಲಿಹಾಳ, ವೆಂಕಟೇಶ ಪೂಜಾರ, ಮಂಜುನಾಥ ಮ್ಯಾಗಡೆ, ಪಾಮಣ್ಣ ಪೂಜಾರ, ಕನಕಪ್ಪ ತಿಪ್ಪನಾಳ, ಯಂಕಪ್ಪ ತಿಪ್ಪನಾಳ, ಕೃಷ್ಣಪ್ಪ ಉಪ್ಪಾರ, ದುರುಗೇಶ ನಾಯಕ ಇತರರು ಇದ್ದರು.