ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಬಹಳ ನಿರೀಕ್ಷೆಗಳನ್ನು ಹೊಂದಿದ್ದ ಕೋಲಾರಕ್ಕೆ ಈ ಬಾರಿಯ ಬಜೆಟ್‌ನಲ್ಲೂ ಶೂನ್ಯ ಕೊಡುಗೆ. ೧೫ನೇ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಕೋಲಾರ ಜಿಲ್ಲೆಗೆ ಪ್ರಮುಖ ಕೊಡುಗೆ ನೀಡುತ್ತಾರೆಂಬ ಜನತೆಯ ನಿರೀಕ್ಷೆ ಹುಸಿಯಾಗಿದೆ.ಜನರ ನಿರೀಕ್ಷೆ ಏನಿತ್ತು?
ಕೋಲಾರಕ್ಕೆ ಮೆಡಿಕಲ್ ಕಾಲೇಜು, ಮಾವು ಸಂಸ್ಕರಣ ಘಟಕ, ಟೊಮೆಟೋ ಸಂಸ್ಕರಣ ಘಟಕ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎ.ಪಿ.ಎಂ.ಸಿ ಮಾರುಕಟ್ಟೆಗೆ ಜಾಗ ಸೇರಿದಂತೆ ಹಲವು ಯೋಜನೆಗಳಿಗೆ ವಿಶೇಷ ಪ್ಯಾಕೇಜ್ ಘೊಷಣೆ ಮಾಡುವ ನೀರಿಕ್ಷೆಯನ್ನು ಜಿಲ್ಲೆಯ ಜನರು ಹೊಂದಿದ್ದರು. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು, ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ. ವಿಶೇಷ ವಿದರ್ಭ ಪ್ಯಾಕೇಜ್ ಘೋಷಣೆ ಇಲ್ಲದೆ ಮತ್ತೊಮ್ಮೆ ಕೋಲಾರ ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ.ಕೋಲಾರ ಆಂಧ್ರ ತಮಿಳುನಾಡು ಗಡಿಗೆ ಹೊಂಡಿಕೊಂಡಿರುವ ಜಿಲ್ಲೆ ಜಿಲ್ಲೆಯದಲ್ಲಿ ೪ ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಕಾಂಗ್ರೆಸ್ ಎಂಎಲ್‌ಸಿಗಳು ಇದ್ದರೂ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಗಳನ್ನು ಪ್ರಕಟಿಸಿಲ್ಲ.
ಹುಸಿಯಾದ ಸಚಿವರ ಭರವಸೆಜ.೨೬ ರಂದು ಗಣರಾಜ್ಯೋತ್ಸವಕ್ಕೆ ಆಗಮಿಸಿದ್ದ ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಈ ಬಾರಿಯ ಬಜೆಟ್ ನಲ್ಲಿ ಕೋಲಾರಕ್ಕೆ ಮೆಡಿಕಲ್ ಕಾಲೇಜು ಹಾಗೂ ವರ್ತುಲ ರಸ್ತೆಗೆ (ರಿಂಗ್ ರಸ್ತೆ) ಬಜೆಟ್ ನಲ್ಲಿ ಘೊಷಣೆ ಮಾಡಿ, ಮಂಡನೆಯಾದ ೧೫ ದಿಗನಗಳೊಳಗೆ ಶಂಕುಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದರು.
ಬಜೆಟ್ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟಿದ್ದ ಕೋಲಾರ ಜಿಲ್ಲೆಯನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ ಎಂದು ಜನರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ೩,೭೧,೩೮೩ ಕೋಟಿ ರು.ಗಳ ಗಾತ್ರದ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಕನಿಷ್ಠ ೧೦೦ ಕೋಟಿ ರು. ವೆಚ್ಚದ ಒಂದೇ ಒಂದು ಯೋಜನೆಯನ್ನು ಜಿಲ್ಲೆಗೆ ನೀಡಿಲ್ಲ ಎಂದು ಜಿಲ್ಲೆಯ ಜನತೆ ಟೀಕಿಸಿದ್ದಾರೆ.ನೀರು ಶುದ್ಧೀಕರಣ ಪ್ರಸ್ತಾಪವೇ ಇಲ್ಲಕೆಸಿ ವ್ಯಾಲಿ ಯೋಜನೆಗೆ ಅನುಧಾನ ನೀಡಿದ ಇದೇ ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಎರಡು ಬಾರಿ ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗಿದ್ದು, ಅಂತರ್ಜಲದ ಮಟ್ಟ ಸಹ ಏರಿಕೆಯಾಗಿದೆ. ಆದರೆ ಮೂರನೇ ಬಾರಿ ಶುದ್ಧೀಕರಿಸಿ ಕೋಲಾರಕ್ಕೆ ನೀರು ಹರಿಸಬೇಕು ಎನ್ನುವ ಒತ್ತಾಯವಿದ್ದರೂ ಬಜೆಟ್‌ನಲ್ಲಿ ಈ ವಿಷಯದ ಪ್ರಸ್ತಾಪವೇ ಇಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.