ಸಾರಾಂಶ
ಮಾಲೂರು: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನವೀಕರಣಕ್ಕೆ ಬಜೆಟ್ ನಲ್ಲಿ ಅನುದಾನ ನೀಡಿರುವ ಘನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಬೈರತಿ ಸುರೇಶ್ ರವರಿಗೆ ಹಾಗೂ ತಾಲೂಕಿನ ಶಾಸಕರಾದ ಕೆ.ವೈ. ನಂಜೇಗೌಡರವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ತಿಳಿಸುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ವಸಂತ್ ತಿಳಿಸಿದರು.

ಅವರು ತಮ್ಮ ವೈದ್ಯ ಸಿಬ್ಬಂದಿ ಜತೆ ಸಂತಸ ಹಂಚಿಕೊಂಡು ಮಾತನಾಡಿ, ಮಾಲೂರು ಪಟ್ಟಣವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಬೃಹತ್ ಕೈಗಾರಿಕಾ ಪ್ರಾಂಗಣಗಳು ಇರುವುದರಿಂದ ಅನ್ಯ ರಾಜ್ಯದವರು ಸಹ ಸಾವಿರಾರು ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಪಟ್ಟಣ ಸೇರಿದಂತೆ ತಾಲೂಕಿನ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದ್ದ ಈಗಿರುವ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಬಜೆಟ್‌ನಲ್ಲಿ ಅನುದಾನ ನೀಡಿರುವುದು ತಾಲೂಕಿನ ಜನತೆಗೆ ಸಂತಸ ದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ.ಶ್ರೀನಿವಾಸ್, ಡಾ.ಮಂಜುನಾಥ್, ಡಾ.ಸುಹಾಸ್, ಪ್ರವೀಣ್, ಸರಸ್ವತಮ್ಮ, ನಳಿನಿ, ರೇಣುಕಾ, ಸೌಮ್ಯ, ಕೃಷ್ಣಪ್ಪ, ಅರುಣಾ, ಗಿರಿಜಾ, ರೂಪ, ಮುರುಳಿ, ಮಂಜುನಾಥ್, ರಘು, ಮಹೇಶ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.