ಕೆಜಿಎಫ್‌ ನಗರಸಭೆಗೆ ₹2.36 ಕೋಟಿ ಉಳಿತಾಯ ಬಜೆಟ್‌

| Published : Mar 29 2025, 12:33 AM IST

ಸಾರಾಂಶ

ಪ್ರಾರಂಬಿಕ ಶುಲ್ಕ ೧೮.೩೬.೩೦.೫೫೪, ನೀರಿಕ್ಷಿತ ಆದಾಯ ೧೦೬.೬೪.೭೦.೦೦೦, ಕೋಟಿ ರೂಪಾಯಿಗಳು ಒಟ್ಟು ೧೨೫.೦೧.೦೦.೬೬೪ ಕೋಟಿ ರೂಪಾಯಿಗಳು, ನೀರಿಕ್ಷಿತ ವೆಚ್ಚ ೧೨೨.೬೪.೬೫.೦೦೦ ಕೋಟಿ ರುಪಾಯಿಗಳ ಬಜೆಟ್‌ನ್ನು ಮಂಡಿಸಿದ್ದು, ನಗರಸಭೆ ಮೈದಾನ ಸುತ್ತಲೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ೧೦ ಕೋಟಿ ಮೀಸಲಿಡಲಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್ ನಗರಸಭೆಯಲ್ಲಿ ಅಧ್ಯಕ್ಷೆ ಇಂದಿರಾಗಾಂಧಿ ಅವರು ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡಿಸಿದರು. ಒಟ್ಟು ೨.೩೬.೩೫.೬೬೪ ಕೋಟಿ ರುಪಾಯಿಗಳ ಉಳಿತಾಯ ಬಜೆಟ್‌ ಘೋಷಿಸಿದ್ದು ಸಭೆ ಒಪ್ಪಿಗೆ ಪಡೆದರು.

ಪ್ರಾರಂಬಿಕ ಶುಲ್ಕ ೧೮.೩೬.೩೦.೫೫೪, ನೀರಿಕ್ಷಿತ ಆದಾಯ ೧೦೬.೬೪.೭೦.೦೦೦, ಕೋಟಿ ರೂಪಾಯಿಗಳು ಒಟ್ಟು ೧೨೫.೦೧.೦೦.೬೬೪ ಕೋಟಿ ರೂಪಾಯಿಗಳು, ನೀರಿಕ್ಷಿತ ವೆಚ್ಚ ೧೨೨.೬೪.೬೫.೦೦೦ ಕೋಟಿ ರುಪಾಯಿಗಳ ಬಜೆಟ್‌ನ್ನು ಮಂಡಿಸಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವಚ್ಛ ನಗರ, ಬೀದಿ ದೀಪ, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ೨೦೨೫-೨೬ನೇ ಸಾಲಿನಲ್ಲಿ ನಗರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ಸಭೆಯಲ್ಲಿ ಮಾತನಾಡಿದರು.

ಉದ್ಯಾನ ಅಭಿವೃದ್ಧಿಗೆ ₹ 3 ಕೋಟಿನಗರಸಭೆ ನೂತನ ಕಚೇರಿ ನಿರ್ಮಾಣ ಹಾಗೂ ಪೀಠೋಪಕರಣಗಳ ಖರೀದಿಗಾಗಿ ೫ ಕೋಟಿ, ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ೭.೮೦ ಕೋಟಿ, ನಗರಸಭೆ ಮೈದಾನ ಸುತ್ತಲೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ೧೦ ಕೋಟಿ, ಕಿಂಗ್ ಜಾರ್ಜ್ ಹಾಲ್ ಆವರಣದಲ್ಲಿ ಉದ್ಯಾನವನ ಅಭಿವೃದ್ಧಿಗೆ ೩ ಕೋಟಿ, ನಗರಸಭೆ ಒಡೆತನದ ಆಶ್ರಯ ಯೋಜನೆಗೆ ಮೀಸಲಿರಿಸಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ ೫ ಕೋಟಿ, ನಗರಸಭೆ ವ್ಯಾಪ್ತಿಗೊಳಪಡುವ ಎಲ್ಲ ವಾರ್ಡ್ಗಳಲ್ಲಿ ಕೊಳವೆ ಬಾವಿಗಳನ್ನು ಕೊರೆದು ಪಂಪು, ಮೋಟಾರ್, ಪೈಪ್ ಲೈನ್ ಹಾಗೂ ಓವರ್ ಹೆಡ್ ಟ್ಯಾಂಕ್, ಜಿ.ಎಲ್.ಎಸ್.ಆರ್ ಇತ್ಯಾದಿ ನೀರು ಸರಬರಾಜು ಕಾಮಗಾರಿಗಳಿಗೆ ರೂ ೭.೦೮ ಕೋಟಿಗಳನ್ನು ಮೀಸಲಿರಿಸಲಾಗಿದೆ. ಘನ ತ್ಯಾಜ್ಯ ವಿಲೇವಾರಿ ಯೋಜನೆಯಡಿ ಯಂತ್ರೋಪಕರಣಗಳ ಖರೀದಿದಾಗಿ ರೂ ೫.೯೮ ಕೋಟಿ, ಅರ್ಹ ಫಲಾನುಭವಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ನೀಡಲು ರೂ ೧.೩೯ ಕೋಟಿ, ಕೆಜಿಎಫ್ ನಗರದಲ್ಲಿನ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ರೂ ೮.೬೧ ಕೋಟಿ, ನಗರಸಭೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಖರೀದಿ ಹಾಗೂ ನಿರ್ವಹಣೆಗಾಗಿ ೨.೮೩ ಕೋಟಿ, ನೈರ್ಮಲ್ಯ ಸಾಮಗ್ರಿಗಳ ಖರೀದಿಗೆ ೪೫ ಲಕ್ಷ, ಸ್ಮಶಾನ ಅಭಿವೃದ್ಧಿಗೆ ರೂ ೪. ಲಕ್ಷ ರೂಗಳನ್ನು ಮೀಸಲಿರಿಸಲಾಗಿದೆ.ಇದು ಅಧರ್ಮದ ಸಭೆ

ಬಜೆಟ್ ಸಭೆಗೂ ಮುನ್ನ ಇದು ಅಧರ್ಮದಿಂದ ನಡೆಯುತ್ತಿರುವ ನಗರಸಭೆ ಇಲ್ಲಿ ನ್ಯಾಯ, ಧರ್ಮ ಎಂಬುದು ಕಣ್ಮರೆಯಾಗಿದ್ದು, ಸಾಮಾನ್ಯ ಜನರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿ ನಗರಸಭಾ ಸದಸ್ಯ ಮಾಜಿ ಶಾಸಕ ಎಸ್.ರಾಜೇಂದ್ರನ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.ಇವರ ಹಿಂದೆಯೇ ಮತ್ತೊಬ್ಬ ನಗರಸಭಾ ಸದಸ್ಯ ಜಯಪಾಲ್ ಸಾಮಾನ್ಯ ಸಭೆ ಮತ್ತು ವಿಶೇಷ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಮಾಡಿರುವ ಊಟದ ವ್ಯವಸ್ಥೆಯಲ್ಲಿಯೂ ಅಧಿಕಾರಿಗಳು ಅವ್ಯವಹಾರ ನಡೆಸಿದ್ದು, ೧೦೦ ರಿಂದ ೨೫೦ ರೂಪಾಯಿಗೆ ಸಿಗುವ ಬಿರಿಯಾನಿ ಊಟಕ್ಕೆ ೪೫೦ ಅಧಿಕಾರಿಗಳು ಪಾವತಿಸಿದ್ದಾರೆ ಎಂದು ಆರೋಪಿಸಿ ತಾವೂ ಸಹ ಬಜೆಟ್ ಸಭೆಯನ್ನು ಬಹಿಷ್ಕರಿಸುವುದಾಗಿ ಸಭೆಯಿಂದ ಹೊರನಡೆದರು.ನಗರಸಭೆ ಉಪಾಧ್ಯಕ್ಷ ಜರ್ಮನ್, ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಪೌರಾಯುಕ್ತ ಪವನ್ ಕುಮಾರ್, ಎಇಇ ಮಂಜುನಾಥ್, ವ್ಯವಸ್ಥಾಪಕ ಶಶಿಕುಮಾರ್, ಜಯರಾಂ, ಅಕೌಂಟ್ ಸೂಪರಿಂಟೆಂಡೆಟ್ ಪದ್ಮಾವತಿ, ನಗರಸಭೆ ಸದಸ್ಯರು ಇದ್ದರು. .