ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರಸಭೆಯ 2025-26ನೇ ಸಾಲಿನ ಆಯವ್ಯಯ ಮಂಡನೆಯಾಗಿದ್ದು, ಪ್ರಸಕ್ತ ಸಾಲಿನ ಒಟ್ಟು ಬಜೆಟ್‌ನಲ್ಲಿ 2 ಕೋಟಿ 77 ಲಕ್ಷ 49 ಸಾವಿರದ 390 ರೂಪಾಯಿಗಳ ಉಳಿತಾಯ ಬಜೆಟ್ ಅನ್ನು ಮಂಡಿಸಲಾಗಿದೆ.ನಗರಸಭೆಯ ಕಾರ್ಯಾಲಯದ ಸರ್‌ಎಂವಿ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಸಮಕ್ಷಮದಲ್ಲಿ ಎ.ಗಜೇಂದ್ರ ಅವರು ಬಜೆಟ್ ಮಂಡಿಸಿದರು.
ವಿವಿಧ ವಿಭಾಗಗಳ ಒಟ್ಟು 117 ಕೋಟಿ 13ಲಕ್ಷ 82 ಸಾವಿರ ರೂ.ಗಳ ನೀರಿಕ್ಷಿತ ಆದಾಯದಲ್ಲಿ 114 ಕೋಟಿ 36ಲಕ್ಷ 32 ಸಾವಿರದ 610 ರೂ.ಗಳ ನಿರೀಕ್ಷಿತ ವೆಚ್ಚವನ್ನು ತೋರಿಸಿದ್ದಾರೆ.2 ಕೋಟಿ 77 ಲಕ್ಷ 49 ಸಾವಿರದ 390 ರೂಪಾಯಿಗಳ ಉಳಿತಾಯ ಬಜೆಟ್ ಘೋಷಿಸಿದ್ದು ಸಭೆ ಒಪ್ಪಿಗೆ ಪಡೆದರು.2025-26ನೇ ಸಾಲಿನಲ್ಲಿ ರಾಜಸ್ವ ಸ್ವೀಕೃತಿ ರೂಪದಲ್ಲಿ ರೂ 31,22,4500, ಬಂಡವಾಳ ಸ್ವೀಕೃತಿ ರೂ 41,17,75000, ಅಸಾಧಾರಣ ಸ್ವೀಕೃತಿಗಳು-ರೂ 44,73,62000, ಒಟ್ಟು 117,13,82,000 ರೂಗಳ ನಿರೀಕ್ಷಿತ ಆದಾಯದ ನಿರೀಕ್ಷಿಸಲಾಗಿದೆ. ಈ ಪೈಕಿ 114,36,26,100 ರೂಗಳ ನಿರೀಕ್ಷಿತ ಖರ್ಚಿನ ಬಗ್ಗೆ ಸುಧೀರ್ಘ ಚರ್ಚೆಯನ್ನು ಮಾಡಿದ ನಂತರ 2,77,49,390 ರೂ.ಗಳ ಉಳಿತಾಯದ ಬಜೆಟ್ ಅನ್ನು ಮಂಡಿಸಿ ರಾಜಸ್ವ ಮತ್ತು ಬಂಡವಾಳ ಪಾವತಿಗಳಿಗೆ ಅನುಮೋದನೆ ಪಡೆಯಲಾಯಿತು.
16ರಂದು ಮಳಿಗೆಗಳ ಹರಾಜುನಗರಸಭೆಯ ಬಜೆಟ್ ಮಂಡನೆ ವೇಳೆ ಉಪಾಧ್ಯಕ್ಷ ನಾಗರಾಜು ಪ್ರಸ್ತಾಪಿಸಿದ 99 ಮಳಿಗೆಗಳ ಹರಾಜು ಮುಂದೂಡಿಕೆ ವಿಚಾರ ಸಭೆಯಲ್ಲಿ 1ಗಂಟೆಗೂ ಹೆಚ್ಚುಕಾಲ ಕೋಲಾಹಲಕ್ಕೆ ಕಾರಣವಾಯಿತು. ಮಳಿಗೆಗಳ ಹರಾಜು ಏ.16ರಂದು ನಡೆಸುವುದೇ ಸೂಕ್ತ ಎಂದು ಸಂಸದರು ಸ್ಪಷ್ಟನೆ ಕೊಟ್ಟ ಮೇಲೆ ಬಜೆಟ್ ಸಭೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಗಜೇಂದ್ರ, ಪೌರಾಯುಕ್ತ ಮನ್ಸೂರ್ ಅಲಿಖಾನ್, ನಗರಸಭೆ ಸದಸ್ಯರು, ಅಧಿಕಾರಿಗಳುಇದ್ದರು.