ಸಾರಾಂಶ
ಬೀದರ್ ದಕ್ಷಿಣ ಕ್ಷೇತ್ರದ ಬರಿದಾಬಾದ ಗ್ರಾಮದಲ್ಲಿ ರೈತ ಸಂಜುಕುಮಾರ ಅವರ ಎಮ್ಮೆ ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೆಂದ್ರ ಬೆಲ್ದಾಳೆ ಅವರು ಜೆಸ್ಕಾಂ ವತಿಯಿಂದ 50 ಸಾವಿರ ರು.ಪರಿಹಾರ ಧನದ ಚೆಕ್ ನೀಡಿದರು.
ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಬರಿದಾಬಾದ ಗ್ರಾಮದಲ್ಲಿ ರೈತ ಸಂಜುಕುಮಾರ ಅವರ ಎಮ್ಮೆ ಇತ್ತೀಚೆಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಹಿನ್ನೆಲೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೆಂದ್ರ ಬೆಲ್ದಾಳೆ ಅವರು ಜೆಸ್ಕಾಂ ವತಿಯಿಂದ 50 ಸಾವಿರ ರು.ಪರಿಹಾರ ಧನದ ಚೆಕ್ ಕಲ್ಪಿಸಿ ಹೈನುಗಾರಿಕೆ ಮೂಲಕ ಮುಂದಿನ ಉಪಜೀವನಕ್ಕೆ ಆಸರೆ ಮಾಡಿಕೊಳ್ಳುವಂತೆ ತಿಳಿಸಿದರು.
ರೈತರು ಮಳೆಗಾಲದಲ್ಲಿ ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಎಚ್ಚರ ವಹಿಸಬೇಕು. ರಾಸುಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ರಾಸುಗಳು ಸಿಡಿಲು ಬಡಿದು, ಅಥವಾ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಮೃತಪಟ್ಟರೆ ತಕ್ಷಣ ನಮ್ಮ ಕಚೇರಿಗೆ ಸಂಪರ್ಕಿಸಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ಧನ ಒದಗಿಸಲಾಗುವುದು ಅಧಿಕಾರಿಗಳು ಸಹ ರೈತರ ಕರೆ ಮಾಡಿದಾಗ ತಕ್ಷಣ ಸ್ಪಂದಿಸಬೇಕು ಎಂದು ಸೂಚಿಸಿದರು.ರೈತರು ತಪ್ಪದೆ ತಮ್ಮ ಎಮ್ಮೆ, ಹಸುಗಳಿಗೆ ವಿಮೆ ಮಾಡಿಸಿ, ಒಂದೊಮ್ಮೆ ರಾಸುಗಳು ಮೃತಪಟ್ಟರೆ ವಿಮೆ ಹಣವಾದರೂ ಕಷ್ಟಕ್ಕೆ ನೆರವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಜೇಸ್ಕಾಂ ಇಇ ರಮೇಶ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಾಬಾದ, ಮುಖಂಡರಾದ ಕುಶಲರಾವ ಯಾಬಾ, ಮಾಣಿಕಪ್ಪ ಖಾಶೆಂಪುರ, ಘಾಳೇಪ್ಪ ಚಟ್ಟನಳ್ಳಿ, ರಾಜಕುಮಾರ ಪಾಟೀಲ, ಲಕ್ಷ್ಮಣರಾವ ಸಿಂಧೋಲ, ವಿರೇಶ ಶಂಭು, ಅರುಣಕುಮಾರ ಪಾಟೀಲ್, ರಾಮಕೃಷ್ಣ, ಶಿವಾ ರೆಡ್ಡಿ ಬರಿದಾಬಾದ, ಫೆಂಟಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.