ಸಾರಾಂಶ
ವಸತಿ ಶಾಲಾ ಶಿಕ್ಷಕರಿಗಾಗಿ ನಡೆದ ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರ ಉದ್ಘಾಟನೆಕನ್ನಡಪ್ರಭ ವಾರ್ತೆ ಯಲಬುರ್ಗಾ
ಶಾಲಾ ಹಂತದಲ್ಲಿ ಮಕ್ಕಳಿಗೆ ವೃತ್ತಿ ಶಿಕ್ಷಣ ನೀಡುವುದರಿಂದ ಭವಿಷ್ಯದಲ್ಲಿ ಅವರು ಆರ್ಥಿಕ ಸ್ವಾವಲಂಬಿಯಾಗಿ ಸುಂದರ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ವಸತಿ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಗುರುಬಸಪ್ಪ ಮುಡಪಲದಿನ್ನಿ ಹೇಳಿದರು.ತಾಲೂಕಿನ ಹೊಸಳ್ಳಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಕ್ರೈಸ್ ಬೆಂಗಳೂರು ಹಾಗೂ ಅನಾಹತ್ ಯುನೈಟೆಡ್ ಎಫರ್ಟ್ಸ್ ಫೌಂಡೇಶನ್ ಬೆಂಗಳೂರು ಇವುಗಳ ಸಹಯೋಗದಲ್ಲಿ ಕೊಪ್ಪಳ ಜಿಲ್ಲಾ ವಸತಿ ಶಾಲಾ ಶಿಕ್ಷಕರಿಗಾಗಿ ನಡೆದ ವೃತ್ತಿ ಮಾರ್ಗದರ್ಶನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರಾದವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು. ಅಲ್ಲದೆ ವಿದ್ಯಾರ್ಥಿಗಳು ಸಹ ಕಲಿಯುವ ಹಂತದಲ್ಲಿ ಅಭ್ಯಾಸದ ಕಡೆಗೆ ಹೆಚ್ಚು ಗಮನಹರಿಸುವ ಮೂಲಕ ಜೀವನದಲ್ಲಿ ಬದಲಾವಣೆ ಮಾಡಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಭವಿಷ್ಯದಲ್ಲಿ ಹೆತ್ತವರಿಗೆ ದಾರಿದೀಪವಾಗುವ ಛಲ ಬೆಳೆಸಿಕೊಳ್ಳಬೇಕು ಎಂದರು.ಜಿಲ್ಲಾ ಸಮನ್ವಯ ಅಧಿಕಾರಿ ನಾಗರಾಜ ಸಂಗನಾಳ ಮಾತನಾಡಿ, ಮಕ್ಕಳ ಆಸಕ್ತಿ, ಅಭಿರುಚಿಯನ್ನು ಶಿಕ್ಷಕರು ಗುರುತಿಸಬೇಕು. ಜತೆಗೆ ಅವರ ಕಲಿಕೆಯ ಬಗ್ಗೆ ಹೆಚ್ಚು ಗಮನಹರಿಸಿ ಅವರಿಗೆ ಸಂಪೂರ್ಣ ಅರ್ಥವಾಗುವಂತೆ ಬೋಧನೆ ಮಾಡಬೇಕು ಎಂದು ಹೇಳಿದರು.
ವಸತಿ ಶಾಲಾ ಪ್ರಾಂಶುಪಾಲ ವ್ಹಿ.ಬಿ. ಹನುಮಶೆಟ್ಟಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಹೆಚ್ಚು ಸತತ ಅಧ್ಯಯನ ಮಾಡುವ ಮೂಲಕ ಅಂಕ ಪಡೆದು ಶಾಲೆಗೆ ಕೀರ್ತಿ ತರುವಂತರಾಗಬೇಕೆಂದರು.ಈ ಸಂದರ್ಭ ಅತಿಥಿಗಳಾಗಿ ಹನುಮಸಾಗರದ ಇಂದಿರಾಗಾಂದಿ ವಸತಿ ಶಾಲೆಯ ಪ್ರಾಂಶುಪಾಲ ಅನಿಲ್ ಸಂಗಮ್, ಸಂಪನ್ಮೂಲ ವ್ಯಕ್ತಿ ನಿಂಗಪ್ಪ, ನಾಗರಾಜ ಯಾದವ, ಶಿಕ್ಷಕರಾದ ರವೀಂದ್ರ ಮಾಳೆಕೊಪ್ಪ, ದ್ಯಾಮಪ್ಪ ರಾಜೂರು, ರೇಣುಕಾ ಪಾಟೀಲ, ವಿಜಯಕುಮಾರ ದೊಡ್ಮನಿ, ಶಾಂತಾವೀರಯ್ಯ ಬಲವಂಜಿಮಠ, ಶಿವಲೀಲಾ ಜಕ್ಕಲಿ, ಮಂಜುಳಾ ನರೇಂದ್ರ, ಕಳಕೇಶ ಅರಕೇರಿ, ಪುರುಷೋತ್ತಮ ಪೂಜಾರ ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು.