ಸಾರಾಂಶ
ಕ್ರಿಯಾಶಕ್ತಿ ಪ್ರತಿಯೊಬ್ಬರಲ್ಲಿಯೂ ಬೇರೆಯಾಗಿದ್ದು, ಅದನ್ನು ಮಹಿಳೆ ಗುರುತಿಸಿಕೊಂಡು ಬೆಳೆಸಿಕೊಳ್ಳುವಲ್ಲಿ ಹಿಂದುಳಿದಿದ್ದಾಳೆ. ಎಷ್ಟೇ ಅಡೆತಡೆಗಳು ಬಂದರೂ ಮಹಿಳೆಯು ಉನ್ನತಿಯಲ್ಲಿ ಬರುವುದು ಅಸಹಜ. ಆದರೂ ಇಂದಿನ ಮಹಿಳೆ ಗಾಂಭಿರ್ಯತೆ ಬೆಳೆಸಿಕೊಂಡು ಅಸ್ತಿತ್ವ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಧಾರವಾಡ:
ಪ್ರತಿಯೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾ ವೇದಿಕೆ ಕಲ್ಪಿಸುವ ಮೂಲಕ ಅವರ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಉಪ್ಯಾಸಕಿ ಗಾಯತ್ರಿ ಹುದ್ದಾರ ಹೇಳಿದರು.ಇಲ್ಲಿಯ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಸಖಿ-ಸಂಗಮ ಅಂತರ್ ಕಾಲೇಜುಗಳ ವಿವಿಧ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ವಿದ್ಯಾರ್ಥಿಗಳು ಬಹುಮುಖ ಕೌಶಲ್ಯ ಬೆಳೆಸಿಕೊಳ್ಳುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.
ಕ್ರಿಯಾಶಕ್ತಿ ಪ್ರತಿಯೊಬ್ಬರಲ್ಲಿಯೂ ಬೇರೆಯಾಗಿದ್ದು, ಅದನ್ನು ಮಹಿಳೆ ಗುರುತಿಸಿಕೊಂಡು ಬೆಳೆಸಿಕೊಳ್ಳುವಲ್ಲಿ ಹಿಂದುಳಿದಿದ್ದಾಳೆ. ಎಷ್ಟೇ ಅಡೆತಡೆಗಳು ಬಂದರೂ ಮಹಿಳೆಯು ಉನ್ನತಿಯಲ್ಲಿ ಬರುವುದು ಅಸಹಜ. ಆದರೂ ಇಂದಿನ ಮಹಿಳೆ ಗಾಂಭಿರ್ಯತೆ ಬೆಳೆಸಿಕೊಂಡು ಅಸ್ತಿತ್ವ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ದಯಾನಂದ ಎಂ. ಬಂಡಿ, ಚಿತ್ರಕಲೆ, ಶಿಲ್ಪ-ವಾಸ್ತುಶಿಲ್ಪ, ಸಂಗೀತ ಮತ್ತು ಕಾವ್ಯ ಪಠ್ಯವಿಷಯಗಳನ್ನು ರೂಢಿಸಿಕೊಂಡರೆ ಜೀವನದಲ್ಲಿ ಭವಿಷ್ಯ ವ್ಯಕ್ತಿತ್ವ ಉಜ್ವಲವಾಗುತ್ತದೆ ಎಂದರು.
ವಚನ ಮತ್ತು ಕೀರ್ತನ ಗಾಯನ, ಕೋಲಾಜ್, ಚರ್ಚಾಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಮತ್ತು ಏಕವ್ಯಕ್ತಿ ನೃತ್ಯ ಎಂಬ ಐದು ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಜಿಲ್ಲೆಯ 25 ಕಾಲೇಜುಗಳ 33 ತಂಡಗಳು ಭಾಗವಹಿಸಿದ್ದು, 123 ವಿದ್ಯಾರ್ಥಿಗಳು ಹಾಗೂ ತಂಡದ ವ್ಯವಸ್ಥಾಪಕರು ಆಗಮಿಸಿದ್ದರು.ಪ್ರಾಚಾರ್ಯರಾದ ಡಾ. ರಾಜೇಶ್ವರಿ ಎಂ. ಶೆಟ್ಟರ್ ಸ್ವಾಗತಿಸಿದರು. ಡಾ. ಅಶ್ವಿನಿ ಪಾಟೀಲ, ವಿಶಾಲಾ ಕರೀಕಟ್ಟಿ, ಚೇತನಾ ಎಂ., ಇದ್ದರು.