ಒಳ್ಳೆ ದೇವಸ್ಥಾನ ಕಟ್ಟಿದ್ದೀರಿ ಹಾಗೆಯೇ ನಿಮ್ಮ ಊರಿನಲ್ಲಿ ಉತ್ತಮವಾದ ಒಂದು ಶಾಲೆ ಕಟ್ಟಿಸಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತೇನೆ ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರುಳಿಧರ್ ಹಾಲಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಒಳ್ಳೆ ದೇವಸ್ಥಾನ ಕಟ್ಟಿದ್ದೀರಿ ಹಾಗೆಯೇ ನಿಮ್ಮ ಊರಿನಲ್ಲಿ ಉತ್ತಮವಾದ ಒಂದು ಶಾಲೆ ಕಟ್ಟಿಸಿ ಶಿಕ್ಷಣಕ್ಕೆ ಆದ್ಯತೆ ಕೊಡುತ್ತೇನೆ ಎಂದು ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರುಳಿಧರ್ ಹಾಲಪ್ಪ ಹೇಳಿದರು. ಗುಬ್ಬಿ ತಾಲೂಕಿನ ಚಿಕ್ಕಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಮಂಡಲ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇವರನ್ನು ನೋಡಿದರೆ ತಿರುಪತಿ ಸಾಕ್ಷಾತ್ ವೆಂಕಟೇಶ್ವರ ಸ್ವಾಮಿ ನೋಡಿದ ಹಾಗೆ ಆಗುತ್ತೆ. ನಿಮ್ಮ ಹಳ್ಳಿ ಚಿಕ್ಕದಾದರೂ ಒಳ್ಳೆ ದೇವಾಲಯ ಕಟ್ಟಿದ್ದೀರಿ. ನನಗೆ ತುಂಬಾ ಸಂತೋಷ ದೇವಾಲಯ ನಿರ್ಮಾಣಕ್ಕೆ ಗಣ್ಯಾತಿ ಗಣ್ಯರು ಹಾಗೂ ಕುಲಬಾಂಧವರು ಸೇರಿ ಈ ಅದ್ಭುತ ಕೆಲಸ ಮಾಡಿದ್ದೀರಿ. ಹಾಗೆಯೇ ನಿಮ್ಮ ಮಕ್ಕಳು ಬೇರೆ ಊರಿಗೆ ಹೋಗಿ ಬೇರೆ ಊರಿನ ಶಾಲೆಯಲ್ಲಿ ಓದುವಂತ ಪರಿಸ್ಥಿತಿ ಬಂದಿದೆ. ಹಾಗಾಗಿ ಒಂದು ಶಾಲೆಯನ್ನು ನಿರ್ಮಾಣ ಮಾಡಿ ನಾನು ಕೂಡ ಬ್ಯಾಂಕಿನಲ್ಲಿ ಭದ್ರತಾ ಠೇವಣಿಯನ್ನು ಇಡುತ್ತೇನೆ ಅದರಿಂದ ಬರುವಂತಹ ಬಡ್ಡಿ ಹಣದಲ್ಲಿ ಶಾಲೆ ನಡೆಸಿ ಎಂದರು.ಈ ಸಂದರ್ಭದಲ್ಲಿ ಕುಂಚಿಟಿಗರ ಸಂಘದ ರಾಜ್ಯಾಧ್ಯಕ್ಷ ರಂಗಹನುಮಯ್ಯ, ಜಗದೀಶ್, ಪುಟ್ಟಲಿಂಗಯ್ಯ, ಮಂಜುನಾಥ್, ಹಾಲಪ್ಪ, ತಿಮ್ಮಯ್ಯ, ಬಾಲಹನುಮಯ್ಯ, ಸಿನಪ್ಪ ಇತರರಿದ್ದರು.