ಮನೆ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಆಧುನಿಕ ತಂತ್ರಜ್ಞಾನ, ನವೀನ ನಿರ್ಮಾಣ ಸಾಮಗ್ರಿಗಳು ಮತ್ತು ಒಳಾಂಗಣ-ಹೊರಾಂಗಣ ವಿನ್ಯಾಸಗಳ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಮೂರು ದಿನಗಳ `ಬಿಲ್ಡ್ ಟೆಕ್ ಎಕ್ಸ್ ಪೋ''''ಗೆ ಶುಕ್ರವಾರ ನಗರದ ಪಬ್ಲಿಕ್ ಗಾರ್ಡನ್‌ನ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಕನ್ನಡಪ್ರಭ ವಾರ್ತೆ ಕಲಬುರಗಿ ಮನೆ, ವಾಣಿಜ್ಯ ಕಟ್ಟಡಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿರುವ ಆಧುನಿಕ ತಂತ್ರಜ್ಞಾನ, ನವೀನ ನಿರ್ಮಾಣ ಸಾಮಗ್ರಿಗಳು ಮತ್ತು ಒಳಾಂಗಣ-ಹೊರಾಂಗಣ ವಿನ್ಯಾಸಗಳ ವೈವಿಧ್ಯಮಯ ಉತ್ಪನ್ನಗಳನ್ನು ಒಂದೇ ಸೂರಿನಡಿ ಪರಿಚಯಿಸುವ ಮೂರು ದಿನಗಳ `ಬಿಲ್ಡ್ ಟೆಕ್ ಎಕ್ಸ್ ಪೋ''''''''ಗೆ ಶುಕ್ರವಾರ ನಗರದ ಪಬ್ಲಿಕ್ ಗಾರ್ಡನ್‌ನ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.ಯುವ ಮುಖಂಡರಾದ ಶರಣು ಅಲ್ಲಮಪ್ರಭು ಪಾಟೀಲ್, ಪ್ರಫುಲ್ ಶಶೀಲ್ ನಮೋಶಿ ರಿಬ್ಬನ್ ಕತ್ತರಿಸುವ ಮೂಲಕ ಎಕ್ಸ್ ಪೋಗೆ ಚಾಲನೆ ನೀಡಿದರು.ಜೆಎಸ್‌ಡಬ್ಲ್ಯು ಅಧಿಕೃತ ವಿತರಕ ಇಮ್ರಾನ್ ಖಾನ್, ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಎಚ್. ಮಿಶ್ರಾ, ಉಪಾಧ್ಯಕ್ಷ ಅನಿಲಕುಮಾರ ಗಂಗಾಣೆ ಹಾಗೂ ಕಾರ್ಯದರ್ಶಿ ಮನೀಶ್ ವೈಕುಂಠ, ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರ್ಸ್ ಪರಿಷತ್ ಸದಸ್ಯ ಮುರಳೀಧರ ಜಿ. ಕರಲಗಿಕರ್, ಹಿರಿಯ ಸಿವಿಲ್ ಇಂಜಿನಿಯರರಾದ ಜಗನ್ನಾಥ ಜೋಶಿ, ಸಿದ್ದರಾಮ ನಿರೋಣಿ, ಸಮೀರ ದೇಶಪಾಂಡೆ, ನರಸಿಂಹಲು ಪತ್ತಿ, ಅಮರೇಶ ಪಾಟೀಲ್, ವಿಜಯಕುಮಾರ ಪಾಟೀಲ್, ಸುಮಿತ್ ಬಳಬಟ್ಟಿ, ಜೆಎಸ್‌ಡಬ್ಲು ರಿಟೇಲ್ ಹೆಡ್ ಮ್ಯಾನೇಜರ್ ಸಮದ್, ವಲಯ ವ್ಯವಸ್ಥಾಪಕ ಅಬೂಬಕರ್, ಸೈಯದ್ ಇಬ್ರಾಹಿಂ, ಮಹಾದೇವ ಪಾಟೀಲ್, ಯುಎಸ್ ಕಮ್ಯುನಿಕೇಷನ್ ಕಲ್ಮೇಶ ತೋಟದ, ಕಿರಣ ಮತ್ತಿತರರು ಇದ್ದರು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್, ಕಲಬುರಗಿ ವತಿಯಿಂದ ಜೆಎಸ್‌ಡಬ್ಲ್ಯು ನಿಯೋಸ್ಟೀಲ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ಮಾಡ್ಯುಲರ್ ಕಿಚನ್, ಫಾಲ್ಸ್ ಸೀಲಿಂಗ್, ಲೈಟಿಂಗ್, ಟೈಲ್ಸ್, ಗ್ರಾನೈಟ್, ಮಾರ್ಬಲ್, ಸ್ಯಾನಿಟರಿವೇರ್, ಫಿಟ್ಟಿಂಗ್ಸ್ ಸೇರಿದಂತೆ ಕಟ್ಟಡ ನಿರ್ಮಾಣ ಹಾಗೂ ಒಳಾಂಗಣ, ಹೊರಾಂಗಣ ವಿನ್ಯಾಸಕ್ಕೆ ಸಂಬoಧಿಸಿದ ವಿವಿಧ ಉತ್ಪನ್ನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರದರ್ಶನ ಮಳಿಗೆಗಳಿವೆ. ನೂರಕ್ಕೂ ಹೆಚ್ಚು ಕಂಪನಿಗಳು ಭಾಗಿ: ವಿವಿಧ ಸಂಸ್ಥೆಗಳ ಉತ್ಪನ್ನಗಳು, ಹೊಸ ವಿನ್ಯಾಸಗಳು ಮತ್ತು ತಂತ್ರಜ್ಞಾನಗಳ ಕುರಿತು ನೇರ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 10-30ರಿಂದ ರಾತ್ರಿ 8-30ರ ತನಕ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ.
ನಾಳೆಯವರೆಗೆ ಪ್ರದರ್ಶನ: ಮೂರು ದಿನಗಳ ಎಕ್ಸ್ ಪೋದಲ್ಲಿ ಸಾರ್ವಜನಿಕರು, ಗೃಹ ನಿರ್ಮಾಣದ ಆಸಕ್ತರು, ಸಿವಿಲ್ ಇಂಜಿನಿಯರ್‌ಗಳು, ವಾಸ್ತುಶಿಲ್ಪಿಗಳು, ಗುತ್ತಿಗೆದಾರರು ಹಾಗೂ ಕಟ್ಟಡ ನಿರ್ಮಾಣ ಕ್ಷೇತ್ರದ ವೃತ್ತಿಪರರು ಭಾಗವಹಿಸಿ ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಬಹುದಾಗಿದ್ದು, ಸೆ.6ರಂದು ಪ್ರದರ್ಶನ ಕೊನೆಗೊಳ್ಳಲಿದೆ.