ವೈಚಾರಿಕತೆ ನೆಲಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಿ: ರುದ್ರೇಗೌಡ

| Published : Aug 15 2024, 01:54 AM IST

ಸಾರಾಂಶ

ಕಡೂರು, ವೈಚಾರಿಕತೆ ನೆಲಗಟ್ಟಿನ ಮೂಲಕ ಮನುಷ್ಯ ಬದುಕು ಕಟ್ಟಿಕೊಂಡು ಕಾಯಕದ ನೆಲೆಯಲ್ಲಿ ಆದರ್ಶಗಳಿಗೆ ದಾರಿಮಾಡಿ ಕೊಳ್ಳಬೇಕೆಂದು ಚಿಂತಕ ವಿ. ರುದ್ರೇಗೌಡ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ 8ನೇ ದಿನದ ಶ್ರಾವಣ ಸಂಜೆ, ಶರಣರ ಸಂದೇಶ

ಕನ್ನಡಪ್ರಭ ವಾರ್ತೆ, ಕಡೂರು

ವೈಚಾರಿಕತೆ ನೆಲಗಟ್ಟಿನ ಮೂಲಕ ಮನುಷ್ಯ ಬದುಕು ಕಟ್ಟಿಕೊಂಡು ಕಾಯಕದ ನೆಲೆಯಲ್ಲಿ ಆದರ್ಶಗಳಿಗೆ ದಾರಿಮಾಡಿ ಕೊಳ್ಳಬೇಕೆಂದು ಚಿಂತಕ ವಿ. ರುದ್ರೇಗೌಡ ತಿಳಿಸಿದರು.

ಪಟ್ಟಣದ ಯಳನಡು ಮಠದಲ್ಲಿ ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಎಂಟನೇ ದಿನದ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮದಲ್ಲಿ ವಚನದಲ್ಲಿ ಸಮಾನತೆ ಅವಕಾಶಗಳು ಕುರಿತು ಉಪನ್ಯಾಸ ನೀಡಿದರು. ಶರಣ ಪರಂಪರೆ ಎಲ್ಲ ಶರಣರು ಅನುಭವ ಮಂಟಪದಲ್ಲಿ ಜಾತಿ, ಮತ, ಲಿಂಗಭೇದ ಮರೆತು ಎಲ್ಲರೂ ಒಟ್ಟಾಗಿ ಸಮ ಸಮಾಜದ ನಿರ್ಮಾಣಕ್ಕೆ ತಮ್ಮದೇ ಅನುಭವದ ನುಡಿಗಳು ವಚನಗಳಾಗಿ ಮಾರ್ಪಟ್ಟು ಪ್ರತಿಯೊಬ್ಬರು ಅಂತರಂಗ ಬಹಿರಂಗದ ಶುದ್ಧಿ ಮಾಡಿಕೊಂಡು ಜೀವನ ಸಾರ್ಥಕತೆ ಪಡೆದುಕೊಳ್ಳಬೇಕೆಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ವರ್ಗಭೇದ , ಜಾತಿಭೇದ ಲಿಂಗಭೇದದ ತಾರತಮ್ಯ ಹೋಗಲಾಡಿಸಿ ಪ್ರತಿಯೊಬ್ಬರೂ ಮಾಡುವ ಕಾಯಕ ಮುಖ್ಯಅದರಲ್ಲಿ ತಾರತಮ್ಯ ಭಾವನೆ ಸಲ್ಲದೆಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಕೆ.ಬಿ.ಬಸವರಾಜಪ್ಪ ಮಾತನಾಡಿ, ಶ್ರಾವಣ ಸಂಜೆ ಶರಣರ ಸಂದೇಶದಲ್ಲಿ ಎಲ್ಲರ ಅಭ್ಯುದಯ ಮತ್ತು ಸಮ ಸಮಾಜದ ನಿರ್ಮಾಣ ಸಾಕ್ಷೀಕರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೋಬಳಿ ಅಧ್ಯಕ್ಷ ಜಿ.ಟಿ. ರಾಜಶೇಖರ್, ಹಿರಿಯರಾದ ಎಚ್.ವಿ.ಗಿರೀಶ್, ಕೆ.ಜೆ.ಚಂದ್ರಪ್ಪ, ಬಿ.ಟಿ ಪ್ರೇಮಕುಮಾರ್, ತಡಗ ಜಯಣ್ಣ, ಆಸಂದಿ ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆ ಮಲ್ಲಪ್ಪ ಮುಂತಾದವರು ಭಾಗವಹಿಸಿದ್ದರು.

13ಕೆಕೆಡಿಯು3.

ಕಡೂರು ಪಟ್ಟಣದ ಯಳನಡು ಮಠದಲ್ಲಿ ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ 8ನೇ ದಿನದ ಶ್ರಾವಣ ಸಂಜೆ ಶರಣರ ಸಂದೇಶ ಕಾರ್ಯಕ್ರಮ ನಡೆಯಿತು.