ಸಾರಾಂಶ
ಅಜ್ಜಂಪುರ : ಉತ್ತಮ ಸಮಾಜ ಕಟ್ಟುವ, ಶಾಂತಿಯುತ ನಾಡು ನಿರ್ಮಿಸುವ ಹಾಗೂ ಬಲಿಷ್ಠ ರಾಷ್ಟ್ರ ರೂಪಿಸುವಂತಹ ಶಿಕ್ಷಣ ನಮ್ಮದಾಗಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನೊಳಂಬ ಲಿಂಗಾಯುತ ಸಂಘ, ಗುರು ಸಿದ್ದರಾಮೇಶ್ವರ ಭವನ ಉಪಸಮಿತಿ ಮತ್ತು ಜಿಜಿಹಳ್ಳಿಯ ದಾನಿ ಲಿಂಗೈಕ್ಯ ಜಿ.ಎಸ್ ಸಿದ್ದರಾಮಪ್ಪ (ಚನ್ನಬಸಪ್ಪ) ಸ್ಮರಣಾರ್ಥವಾಗಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೊಳಂಬ ಲಿಂಗಾಯುತ ಸಂಘದ ಮಾಜಿ ರಾಜ್ಯಾಧ್ಯಾಕ್ಷ ಎಸ್.ಎಂ.ನಾಗರಾಜ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡುತ್ತಾ ಬಂದಿದ್ದೇವೆ ಎಂದರು.ದಾನಿಗಳಾದ ತುಮಕೂರಿನ ಆದರ್ಶ ಕೆಮಿಕಲ್ಸ್ ವ್ಯವಸ್ಥಾಪಕ ಜಿ.ಎಸ್ ಓಂಕಾರಮೂರ್ತಿ ಅವರು ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಅದರ ಸಾಕಾರಕ್ಕೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಶ್ರಮವಹಿಸಬೇಕು. ನಿರಂತರ ಅಭ್ಯಾಸದಲ್ಲಿ ತೊಡಗಬೇಕು. ಬಂದ ಅವಕಾಶ ಸರಿಯಾಗಿ ಬಳಸಿಕೊಂಡು, ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ನೊಳಂಬ ಲಿಂಗಾಯುತ ಸಂಘ ರಾಜ್ಯಾಧ್ಯಕ್ಷ ಚಂದ್ರಶೇಖರ್, ವಿಪ ಸದಸ್ಯ ಎಸ್.ಎಲ್.ಭೋಜೆಗೌಡ, ಮಾಜಿ ಶಾಸಕ ಡಿ.ಎಸ್ ಸುರೇಶ್, ನಿವೃತ್ತ ಐಪಿಎಸ್ ಅಧಿಕಾರಿ ಸಿದ್ದರಾಮಪ್ಪ, ಜಿಪಂ ಮಾಜಿ ಸದಸ್ಯ ದೃವಕುಮಾರ್, ಶಂಬೈನೂರು ಆನಂದಪ್ಪ, ಎಂ ಕೃಷ್ಣಮೂರ್ತಿ, ಜೆ.ಡಿ ಎಸ್ ಮುಖಂಡ ಎಸ್ ಶಿವಾನಂದ್ ಮಾತನಾಡಿದರು.ನೊಳಂಬ ಸಮಾಜ ಮುಖಂಡ ಕೆ.ಟಿ ಶಶಿಧರ್, ಸಿದ್ದರಾಮೇಶ್ವರ ಭವನ ಸಮಿತಿ ಅಧ್ಯಕ್ಷ ಬಸಪ್ಪ, ಸಿದ್ದರಾಮಪ್ಪ, ಮಧು ಸೂಧನ್, ಚನ್ನವೀರಪ್ಪ, ಓಂಕಾರಪ್ಪ ಇದ್ದರು.ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ನೊಳಂಬ ಸಮಾಜದ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.