ದಸರಾ ನಿಮಿತ್ತ ಎತ್ತುಗಳ ಸ್ಪರ್ಧೆ ಆಯೋಜನೆ
KannadaprabhaNewsNetwork | Published : Oct 16 2023, 01:45 AM IST
ದಸರಾ ನಿಮಿತ್ತ ಎತ್ತುಗಳ ಸ್ಪರ್ಧೆ ಆಯೋಜನೆ
ಸಾರಾಂಶ
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ದಸರಾ ಉತ್ಸವ ಸಮಿತಿ ವತಿಯಿಂದ ನಾಡ ಹಬ್ಬ ದಸರಾ ಅಂಗವಾಗಿ ಶನಿವಾರ ಉತ್ತಮ ಎತ್ತುಗಳ ಸ್ಪರ್ಧೆ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ದಸರಾ ಉತ್ಸವ ಸಮಿತಿ ವತಿಯಿಂದ ನಾಡ ಹಬ್ಬ ದಸರಾ ಅಂಗವಾಗಿ ಶನಿವಾರ ಉತ್ತಮ ಎತ್ತುಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರೈತ ಸಮಿತಿ ಸಂಚಾಲಕ ಮಹಿಪಾಲರೆಡ್ಡಿ ಡಿಗ್ಗಾವಿ, ಪ್ರಸಕ್ತ ವರ್ಷ ವಿಶೇಷವಾಗಿ ರೈತರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಮ್ಮ ಭಾಗದ ರೈತರನ್ನು ಪ್ರೋತ್ಸಾಹಿಸಲು ಹಾಗೂ ಎತ್ತುಗಳ ಬಗ್ಗೆ ಕಾಳಜಿ ಮೂಡಿಸಲು ಈ ಸ್ಪರ್ಧೆಯನ್ನು ನಡೆಸಲಾಗಿದೆ. ಸ್ಪರ್ಧೆಗೆ ಪಟ್ಟಣದ ರೈತರು ಉತ್ತಮವಾಗಿ ಸ್ಪಂದಿಸಿದ್ದಾರೆ. ವಿಶೇಷವಾಗಿ ಅಲಂಕಾರವಾದ ಎತ್ತುಗಳನ್ನು ನೋಡುವುದೆ ಕಣ್ಣುಗಳಿಗೆ ಹಬ್ಬದ ಸಂಭ್ರಮವನ್ನು ನೀಡುತ್ತದೆ ಎಂದರು. ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಗೆ ರೈತ ಬಾಂಧವರು ಚಾಲನೆ ನೀಡಿದರು. ಬಾಜಾ ಭಜಂತ್ರಿಯೊಂದಿಗೆ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕಿತ್ತೂರು ಚೆನ್ನಮ್ಮ ವೃತ್ತ, ಮಾಸಾಬಿ ದರ್ಗಾ, ಬಸವೇಶ್ವರ ವೃತ್ತ, ಮುಖ್ಯ ಬಜಾರ ಮೂಲಕ ಶರಣ ಬಸವೇಶ್ವರ ದೇವಸ್ಥಾನದ ಹತ್ತಿರ ಮುಕ್ತಾಯವಾಯಿತು. ಶರಣ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಉತ್ತಮ ಎತ್ತುಗಳ ಆಯ್ಕೆಯಲ್ಲಿ ಮೂರು ಜೋಡಿಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ ಜೋಡಿಗೆ 5,000 ರು. ದ್ವಿತೀಯ ಜೋಡಿಗೆ 3,000 ರು. ಹಾಗೂ ತೃತಿಯ ಜೋಡಿಗೆ 2,000 ರು.ಗಳು ಪ್ರಶಸ್ತಿ ಘೋಷಿಸಲಾಯಿತು. ಅ.20ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ದಸರಾ ಸಮಿತಿ ತಿಳಿಸಿದೆ. ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 40 ಜೋಡೆತ್ತುಗಳು ಭಾಗವಹಿಸಿ ನೋಡುಗರ ಗಮನ ಸೆಳೆದೆವು. ರೈತ ಮುಖಂಡರು ಹಾಗೂ ದಸರಾ ಉತ್ಸವ ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. --------- ಕೋಟ್ 3ನೇ ವರ್ಷದ ಉತ್ಸವದಲ್ಲಿ ವಿದ್ಯಾರ್ಥಿಗಳ ಜೊತೆಗೆ ರೈತರಿಗಾಗಿ ಹಾಗೂ ಪಟ್ಟಣದ ಮಹಿಳೆಯರಿಗಾಗಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವರ್ಷದಿಂದ ವರ್ಷಕ್ಕೆ ಪಟ್ಟಣದ ದಸರಾ ಉತ್ಸವ ಕಾರ್ಯಕ್ರಮದ ಗಾತ್ರ ಹೆಚ್ಚುತ್ತಿದೆ. ಸರ್ವ ಸದಸ್ಯರ ಹಾಗೂ ಪಟ್ಟಣದ ನಿವಾಸಿಗಳ ಸಹಕಾರ ಅಮೋಘ. ಡಿ.ಸಿ. ಪಾಟೀಲ್, ದಸರಾ ಉತ್ಸವ ಸಮಿತಿ ಅಧ್ಯಕ್ಷ -------- 15ವೈಡಿಆರ್5 ಸುರಪುರ ತಾಲೂಕಿನ ಕೆಂಭಾವಿಯ ದಸರಾ ಉತ್ಸವ ಸಮಿತಿ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶನಿವಾರ ಉತ್ತಮ ಎತ್ತುಗಳ ಸ್ಪರ್ಧೆಗೆ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಚಾಲನೆ ನೀಡಲಾಯಿತು. -------- 15ವೈಡಿಆರ್6 ಸುರಪುರ ತಾಲೂಕಿನ ಕೆಂಭಾವಿಯ ದಸರಾ ಉತ್ಸವ ಸಮಿತಿ ವತಿಯಿಂದ ್ಲ ನಾಡಹಬ್ಬ ದಸರಾ ಅಂಗವಾಗಿ ಶನಿವಾರ ಪಟ್ಣದಲ್ಲಿ ಉತ್ತಮ ಎತ್ತುಗಳ ಸ್ಪರ್ಧಾ ಮೆರವಣಿಗೆ ನಡೆಯಿತು.