ಸಾರಾಂಶ
ಮೇ ೧ರ ರಾತ್ರಿಯಿಂದ ಹೋರಿಗಳು ನಾಪತ್ತೆಯಾಗಿವೆ. ಇದು ಗೋ ಕಳ್ಳತನ ಮಾಡಿದವರ ಕೃತ್ಯವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪುತ್ತೂರು: ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇರುತ್ತಿದ್ದ ಎರಡು ಹೋರಿಗಳು ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಶುಕ್ರವಾರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಮೇ ೧ರ ರಾತ್ರಿಯಿಂದ ಹೋರಿಗಳು ನಾಪತ್ತೆಯಾಗಿವೆ. ಇದು ಗೋ ಕಳ್ಳತನ ಮಾಡಿದವರ ಕೃತ್ಯವಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ನೀಡುವ ಸಂದರ್ಭದಲ್ಲಿ ಬಜರಂಗದಳ ನಗರ ಪ್ರಖಂಡ ಸಂಯೋಜಕ ಜಯಂತ್ ಕುಂಜೂರುಪಂಜ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ಗ್ರಾಮಾಂತರ ಸಂಯೋಜಕ ವಿಶಾಖ್ ಸಸಿಹಿತ್ತು, ರ‍್ಷಿತ್ ಬಲ್ನಾಡ್, ರೂಪೇಶ್ ಬಲ್ನಾಡು, ಜೀವನ್ ಬಲ್ನಾಡು, ಗುರುರಾಜ್ ಬಲ್ನಾಡು ಇದ್ದರು.