8 ತಾಸಿನಲ್ಲಿ 20 ಎಕರೆ ಕುಂಟೆ ಹೊಡೆದು ದಾಖಲೆ ಮಾಡಿದ ಎತ್ತುಗಳು

| Published : Jul 19 2025, 01:00 AM IST

8 ತಾಸಿನಲ್ಲಿ 20 ಎಕರೆ ಕುಂಟೆ ಹೊಡೆದು ದಾಖಲೆ ಮಾಡಿದ ಎತ್ತುಗಳು
Share this Article
  • FB
  • TW
  • Linkdin
  • Email

ಸಾರಾಂಶ

ದೇವರಹಿಪ್ಪರಗಿ: ಮಾನವ ದೈಹಿಕವಾಗಿ ಸಬಲನಾಗಿ ಎಲ್ಲ ರೀತಿಯಲ್ಲಿ ಮಾನಸಿಕ ಸಾಮರ್ಥ್ಯ ಹೊಂದಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಆದರೆ, ಪ್ರಾಣಿಗಳು ಮಾತ್ರ ತಮ್ಮ ಶಕ್ತಿ ಸಾಮರ್ಥ್ಯ ತೋರುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದೀಗ ತಾಲ್ಲೂಕಿನ ಕೋರವಾರ ಗ್ರಾಮದ ಅಶೋಕ ನಾಯಕಲ್ ಎಂಬುವರು ಎತ್ತುಗಳು 8 ಗಂಟೆ ಅವಧಿಯಲ್ಲಿ 20 ಎಕರೆ ಜಮೀನನ್ನು ಕುಂಟೆ ಹೊಡೆದು ಸೈ ಎನಿಸಿಕೊಂಡಿವೆ.

ದೇವರಹಿಪ್ಪರಗಿ: ಮಾನವ ದೈಹಿಕವಾಗಿ ಸಬಲನಾಗಿ ಎಲ್ಲ ರೀತಿಯಲ್ಲಿ ಮಾನಸಿಕ ಸಾಮರ್ಥ್ಯ ಹೊಂದಿದ್ದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲನಾಗುತ್ತಾನೆ. ಆದರೆ, ಪ್ರಾಣಿಗಳು ಮಾತ್ರ ತಮ್ಮ ಶಕ್ತಿ ಸಾಮರ್ಥ್ಯ ತೋರುವಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಇದೀಗ ತಾಲ್ಲೂಕಿನ ಕೋರವಾರ ಗ್ರಾಮದ ಅಶೋಕ ನಾಯಕಲ್ ಎಂಬುವರು ಎತ್ತುಗಳು 8 ಗಂಟೆ ಅವಧಿಯಲ್ಲಿ 20 ಎಕರೆ ಜಮೀನನ್ನು ಕುಂಟೆ ಹೊಡೆದು ಸೈ ಎಣಿಸಿಕೊಂಡಿವೆ. ಶುಕ್ರವಾರ ತಮ್ಮ ಜೋಡಿ ಎತ್ತುಗಳು 20 ಎಕರೆ ಜಮೀನಿನಲ್ಲಿ ನಿರಂತರವಾಗಿ 8 ಗಂಟೆ ಕುಂಟೆ ಹೊಡೆದಿವೆ.

ಅಶೋಕ ನಾಯಕಲ್ ತಮ್ಮ ಹೊಲದಲ್ಲಿ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 3 ಗಂಟೆವರೆಗೆ ನಿರಂತರ ಕುಂಟೆಗಳನ್ನು ಹೆಗಲೇರಿಸಿಕೊಂಡು 20 ಎಕರೆ ಭೂಮಿ ಕುಂಟೆ ಹೊಡೆದದ್ದು ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಜೋಡಿ ಎತ್ತುಗಳು ದಿನಕ್ಕೆ ಐದು ಎಕರೆ ಕುಂಟೆ ಹೊಡೆಯುತ್ತವೆ. ಹೆಚ್ಚೆಂದರೆ 8 ರಿಂದ 10 ಎಕರೆ ಎಡೆ ಹೊಡೆಯಬಹುದು. ಆದರೆ ಈ ಎತ್ತುಗಳು 20 ಎಕರೆ ಜಮೀನಿನಲ್ಲಿ ಕುಂಟೆ ಹೊಡೆದು ಭಲೇ ಜೋಡಿ ಎನಿಸಿಕೊಂಡಿವೆ. ಈ ಎತ್ತುಗಳ ಸಾಧನೆ ಕಂಡು ಗ್ರಾಮಸ್ಥರು ಆಶ್ಚರ್ಯಪಟ್ಟಿದ್ದು, ಎತ್ತುಗಳಿಗೆ ಗುಲಾಲ್‌ ಎರಚಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.