ಗೌರವ, ವಿನಯಶೀಲತೆ ಮತ್ತು ಕೃತಜ್ಞತೆಯಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವೈಯಕ್ತಿಕ ಸಾಧನೆಯೊಂದಿಗೆ ದೇಶದ ಅಭಿವೃದ್ಧಿಗೂ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಲಿ.ಯ ಸಿಎಸ್‌ಆರ್ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಡಾ. ನೀಲ್ ರತನ್ ಶೆಂಡೆ ಹೇಳಿದರು.
ಬಂಟ್ವಾಳ: ಗೌರವ, ವಿನಯಶೀಲತೆ ಮತ್ತು ಕೃತಜ್ಞತೆಯಂತಹ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವೈಯಕ್ತಿಕ ಸಾಧನೆಯೊಂದಿಗೆ ದೇಶದ ಅಭಿವೃದ್ಧಿಗೂ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಲಿ.ಯ ಸಿಎಸ್‌ಆರ್ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಡಾ. ನೀಲ್ ರತನ್ ಶೆಂಡೆ ಹೇಳಿದರು.ಬಂಟ್ವಾಳ ತಾಲೂಕು ಬಂಟರ ಸಂಘದ ವತಿಯಿಂದ ಬಂಟ್ವಾಳ ಬಂಟರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಣ ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತರರನ್ನು ಗೌರವಿಸುವ ಮನೋಭಾವ, ವಿನಯಶೀಲತೆ ಹಾಗೂ ಕುಟುಂಬದ ಸದಸ್ಯರು ಮತ್ತು ಸುತ್ತಮುತ್ತಲಿನ ಜನರು ನೀಡುವ ಪ್ರೀತಿ, ಸಹಕಾರ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಧೈರ್ಯ, ಕನಸು, ಗೌರವ, ವಿನಯ ಮತ್ತು ಕೃತಜ್ಞತೆಯ ಭಾವನೆಗಳೊಂದಿಗೆ ಮುನ್ನಡೆದಾಗ ನಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಸಮಾಜಗಳ ನೂರಾರು ವಿದ್ಯಾರ್ಥಿಗಳಿಗೆ ಸುಮಾರು 60 ಲಕ್ಷ ರು. ಮೊತ್ತದ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಶಿಕ್ಷಣಕ್ಕೆ ಆರ್ಥಿಕ ಅಡಚಣೆ ಎದುರಾಗಬಾರದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂಬ ಉದ್ದೇಶದಿಂದ ಬಂಟ್ವಾಳ ತಾಲೂಕು ಬಂಟರ ಸಂಘದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಲ್ ಕಾರ್ಗೊ ಲಾಜಿಸ್ಟಿಕ್ಸ್ ಮುಂಬೈ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.ಶ್ರೀ ಪ್ಯಾಕ್ ಕಂಟೈನರ್ಸ್ ಪ್ರೈ.ಲಿ., ಮುಂಬೈ ಆಡಳಿತ ನಿರ್ದೇಶಕ ಬಾಲಕೃಷ್ಣ ಎಂ. ರೈ ಉದ್ಘಾಟಿಸಿದರು. ಮಾತನಾಡಿದ ಅವರು, ಬಂಟ ಸಮಾಜವು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಸಾಧನೆ ಮಾಡಿದ್ದು, ಕಷ್ಟಪಟ್ಟು ಕಲಿತವರಿಗೆ ಬದುಕಿನಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಭಾಗವಹಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರೊಡಕ್ಟ್ ಲೋಕಸ್ ನಿರ್ದೇಶಕ ಗೌರವ್ ಶೆಟ್ಟಿ ಕೊಲ್ಯ, ವಿಟ್ಲ ಮುಖ್ಯ ಅತಿಥಿಗಳಾಗಿದ್ದರು.ಸಾಧಕ ವಿದ್ಯಾರ್ಥಿಗಳಾದ ಗಗನ್ ಆಳ್ವದಲಂದಿಲ, ಕ್ರಿಸ್ಮಶೆಟ್ಟಿ ಮೊಡಂಕಾಪು, ತೀರ್ಥ ಶೆಟ್ಟಿ ಸರಪಾಡಿ, ಪ್ರಾಪ್ತಿ ಆಳ್ವ, ಪೃಥ್ವಿ ಎನ್. ಶೆಟ್ಟಿ, ಪ್ರಕೃತಿ ಶೆಟ್ಟಿ ಮಾಣಿ, ಕ್ಷಮಾ ಎಸ್.ಪಿ., ಶ್ರೀಕೃಷ್ಣ ಅಡ್ಯನಡ್ಕ, ದೀಕ್ಷಾ ಜಿ. ಸುವರ್ಣ ಹಾಗೂ ಪ್ರಥಮ್ ಕನ್ಯಾನ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಿಎ ವಿಶ್ವೇಶ್ವರ್ ಅವರನ್ನೂ ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಸುಜೀರ್ ಗುತ್ತು ಐತಪ್ಪ ಆಳ್ವ ಸ್ವಾಗತಿಸಿದರು. ನಗ್ರಿಗುತ್ತು ವಿವೇಕ್ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜೀಪ, ಜತೆ ಕೋಶಾಧಿಕಾರಿ ಶ್ರೀ ವಿದ್ಯಾ ಎ. ರೈ ಬಿ.ಸಿ. ರೋಡ್, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ. ರೈ ಕಲ್ಲಡ್ಕ, ಯುವ ವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರುಗುತ್ತು ಹಾಗೂ ಸಮಿತಿ ಸಂಚಾಲಕ ಉಮಾನಾಥ ರೈ ಮೇರಾವು ಉಪಸ್ಥಿತರಿದ್ದರು.ವಿದ್ಯಾ ಎಸ್. ಶೆಟ್ಟಿ ಬಿ.ಸಿ. ರೋಡ್, ಲೋಕೇಶ್ ಶೆಟ್ಟಿ ಕುಳ ಹಾಗೂ ಶಿವಾನಿ ಬಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ತೃಪ್ತಿ ರೈ ಫರಂಗಿಪೇಟೆ ಪ್ರಾರ್ಥಿಸಿದರು.